ಕೊಪಾ ಅಮೆರಿಕಾ ಫುಟ್ಬಾಲ್ ಟೂರ್ನಿಯಿಂದ ಗ್ರೂಪ್ ಹಂತದಲ್ಲೇ ಅವಮಾನಕರ ಸೋಲು ಅನುಭವಿಸಿ ನಿರ್ಗಮಿಸಿದ ಬ್ರೆಜಿಲ್ ತಂಡದ ರಾಷ್ಟ್ರೀಯ ಕೋಚ್ ಡುಂಗಾರನ್ನು ಮಂಗಳವಾರ ವಜಾ ಮಾಡಿದೆ. ಬ್ರೆಜಿಲ್ ಫುಟ್ಬಾಲ್ ಒಕ್ಕೂಟವು ಹೇಳಿಕೆ ನೀಡಿ, ಡುಂಗಾರನ್ನು ವಜಾ ಮಾಡಿ ಬ್ರೆಜಿಲ್ ರಾಷ್ಟ್ರೀಯ ತಂಡದ ಕೋಚಿಂಗ್ ಸಿಬ್ಬಂದಿಯನ್ನು ವಿಸರ್ಜಿಸುವುದಾಗಿ ತಿಳಿಸಿದೆ.
ಕೊಪಾ ಅಮೆರಿಕ ಆವೃತ್ತಿಯಿಂದ ಬ್ರೆಜಿಲ್ ನಿರ್ಗಮನವು ಆರ್ಥಿಕ ಹಿಂಜರಿತದಿಂದ ತತ್ತರಿಸಿದ ಬ್ರೆಜಿಲ್‌ಗೆ ಹೊಸ ಪೆಟ್ಟು ಬಿದ್ದಿದೆ. ದೇಶವು 2014ರಲ್ಲಿ ತವರು ನೆಲದಲ್ಲಿ ನಡೆದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಜರ್ಮನಿಯು 7-1ರಿಂದ ಬ್ರೆಜಿಲ್ ತಂಡವನ್ನು ಸೋಲಿಸಿತ್ತು. ಆ ಸೋಲಿನಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೊಂದು ಪೆಟ್ಟು ಬಿದ್ದಿದೆ.
ಯುಕಾಡರ್ ಜತೆ 0-0 ಡ್ರಾ ಬಳಿಕ ಹೈಟಿ ವಿರುದ್ಧ ಬ್ರೆಜಿಲ್ 7-1ರಿಂದ ವಿಜಯಗಳಿಸಿತ್ತು. ಆದರೆ ಕೊಪಾ ಕ್ವಾರ್ಟರ್ ಫೈನಲ್ ಹಂತವನ್ನು ಮುಟ್ಟಲು ಪೆರು ಜತೆ ಬ್ರೆಜಿಲ್‌ಗೆ ಡ್ರಾ ಅಗತ್ಯವಾಗಿತ್ತು. ಆದರೆ ವಿವಾದಾತ್ಮಕ ಗೋಲ್ ಮೂಲಕ ಬ್ರೆಜಿಲ್ ಪೆರುವಿಗೆ 1-0ಯಿಂದ ಸೋಲುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ