Publish Date: Wed, 12 Jan 2022 (16:33 IST)
Updated Date: Wed, 12 Jan 2022 (16:34 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಅತಿಥೇಯ ದ.ಆಫ್ರಿಕಾ ದಿಟ್ಟ ಪ್ರತ್ಯುತ್ತರ ನೀಡಿದೆ.
ಎರಡನೇ ದಿನದಾಟದ ಭೋಜನ ವಿರಾಮದ ವೇಳೆಗೆ ಆಫ್ರಿಕಾ ಭಾರತದ ಮೊದಲ ಇನಿಂಗ್ಸ್ ನ 223 ರನ್ ಗಳ ಗುರಿ ಬೆನ್ನತ್ತಿ 3 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ 2, ಉಮೇಶ್ ಯಾದವ್ 1 ವಿಕೆಟ್ ಕಬಳಿಸಿದರು.
ಆದರೆ ಬೆಳಗಿನ ಅವಧಿಯಲ್ಲಿ ವಿಕೆಟ್ ಕಳೆದುಕೊಂಡ ಆಫ್ರಿಕಾ ಬ್ಯಾಟಿಗರು ಸಿಂಗಲ್ಸ್ ಗಳಿಸುವ ಮೂಲಕ ಸ್ಕೋರ್ ಬೋರ್ಡ್ ಚಲಾಯಿಸುತ್ತಲೇ ಸಾಗಿದರು. ಇದರಿಂದಾಗಿ ಮೊದಲ ಅವಧಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಇದೀಗ ರಸ್ಸೀ ವ್ಯಾನ್ ದೆರ್ ದಸನ್ 17, ಕೀಗನ್ ಪೀಟರ್ಸನ್ 40 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಆಫ್ರಿಕಾಗೆ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಕೇವಲ 123 ರನ್ ಗಳಿಸಿದರೆ ಸಾಕು.