ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತ ಪ್ರವೇಶಿಸಲು ಗುಜರಾತ್ ಲಯನ್ಸ್ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಅದಕ್ಕೆ ಪೂರಕವಾಗಿ ರಾಯಲ್ ಚಾಲೆಂಜರ್ಸ್ ಮೊದಲ ಬ್ಯಾಟಿಂಗ್‌ನಲ್ಲಿ 3 ವಿಕೆಟ್ ಕಳೆದುಕೊಂಡು 248 ರನ್ ಬೃಹತ್ ಮೊತ್ತವನ್ನು ಪೇರಿಸಿದೆ.
ವಿರಾಟ್ ಕೊಹ್ಲಿ ಅವರ 55 ಎಸೆತಗಳಲ್ಲಿ 109 ರನ್ ಮತ್ತು ಎಬಿ ಡಿವಿಲಿಯರ್ಸ್ ಅವರ 52 ಎಸೆತಗಳಲ್ಲಿ ಅಜೇಯ 129 ರನ್ ನೆರವಿನಿಂದ ರಾಯಲ್ ಬೃಹತ್ ಮೊತ್ತ ದಾಖಲಿಸಲು ನೆರವಾಯಿತು. ಕೊಹ್ಲಿಯ ಸ್ಕೋರಿನಲ್ಲಿ 5 ಬೌಂಡರಿಗಳು ಮತ್ತು 8 ಸಿಕ್ಸರುಗಳಿದ್ದರೆ, ಡಿ ವಿಲಿಯರ್ಸ್ ಸ್ಕೋರಿನಲ್ಲಿ 10 ಬೌಂಡರಿಗಳು ಮತ್ತು 12 ಸಿಕ್ಸರುಗಳಿವೆ. ವಿರಾಟ್ ಕೊಹ್ಲಿಗೆ ತಮ್ಮ ತಂಡದ ಬೌಲಿಂಗ್ ವೈಫಲ್ಯದ ಅರಿವು ಈಗಾಗಲೇ ಆಗಿದ್ದು, ಅದಕ್ಕಾಗಿ ಬೃಹತ್ ಮೊತ್ತವನ್ನು ಪೇರಿಸಲು ಉದ್ದೇಶಿಸಿದ್ದರು.
ಈ ಮುಂಚೆ ಬಾರಿಸಿದ 180-190 ಗಡಿಯ ಸ್ಕೋರನ್ನು ವಿರೋಧಿ ತಂಡಗಳು ನಿರಾಯಾಸವಾಗಿ ಮುಟ್ಟಿದ್ದವು. ಈ ಹಿನ್ನೆಲೆಯಲ್ಲಿ ಕೊಹ್ಲಿ ಮತ್ತು ಡಿವಿಲಿಯರ್ಸ್ ಸಿಡಿಲಬ್ಬರದ ಆಟಕ್ಕೆ ಮೊರೆ ಹೋಗಿ ಬೃಹತ್ ಮೊತ್ತವನ್ನು ಪೇರಿಸಿದರು. ಆರಂಭದಲ್ಲೇ ಸ್ಫೋಟಕ ಬ್ಯಾಟ್ಸ್‌ಮನ್ ಎಂದು ಹೆಸರಾಗಿದ್ದ ಕ್ರಿಸ್ ಗೇಲ್ ಮತ್ತೆ ಬ್ಯಾಟಿಂಗ್ ವೈಫಲ್ಯ ಪ್ರದರ್ಶಿಸಿ ಕೇವಲ 6 ರನ್‌ಗೆ ಔಟಾದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ