ಸುರೇಶ್ ರೈನಾ ಪತ್ನಿ ಪ್ರಿಯಾಂಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಗುಜರಾತ್ ಲಯನ್ಸ್ ನಾಯಕರಾದ ರೈನಾ ಈಗ ತನ್ನ ಪತ್ನಿ, ಮಗು ಮತ್ತು ಕುಟುಂಬದೊಂದಿಗೆ ನೆದರ್‌ಲೆಂಡ್ಸ್‌ನಲ್ಲಿ ಇದ್ದಾರೆ. ಅವರು ತಮ್ಮ ಪುತ್ರಿಗೆ ಶ್ರೇಯಾಂಶಿ ಎಂದು ಹೆಸರಿಟ್ಟಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಅವರು ಪ್ರಿಯಾಂಕರನ್ನು ವರಿಸಿದ್ದರು.
ರೈನಾ ನೆದರ್‌ಲೆಂಡ್ಸ್‌ಗೆ ತೆರಳಿರುವುದರಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಐಪಿಎಲ್ ಪಂದ್ಯ ಮಿಸ್ ಮಾಡಿಕೊಂಡಿದ್ದಾರೆ. ಕಾನ್ಪುರದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಂದಿನ ಪಂದ್ಯವನ್ನೂ ಅವರು ಮಿಸ್ ಮಾಡಿಕೊಳ್ಳಲಿದ್ದಾರೆ. ರೈನಾ 9 ವರ್ಷಗಳಲ್ಲಿ ಐಪಿಎಲ್ ಪಂದ್ಯವನ್ನು ಮಿಸ್ ಮಾಡುತ್ತಿರುವುದು ಇದೇ ಮೊದಲಾಗಿದೆ.
ರೈನಾ ಐಪಿಎಲ್ ಮೈಲಿಗಲ್ಲಿನ ಸನಿಹವಿದ್ದು, 4000 ರನ್ ಸ್ಕೋರ್ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಲು ಕೇವಲ 15 ರನ್ ಕೊರತೆ ಅನುಭವಿಸಿದ್ದಾರೆ. ಗುಜರಾತ್ ಲಯನ್ಸ್ ಪ್ಲೇಆಫ್ ಬರ್ತ್‌ಗೆ ಬರುವುದು ಹೆಚ್ಚುಕಡಿಮೆ ಖಾತ್ರಿಯಾಗಿದ್ದು, ಆದ್ದರಿಂದ ಇದೇ ಸೀಸನ್‌ನಲ್ಲಿ ರೈನಾ ಈ ಮೈಲಿಗಲ್ಲನ್ನು ದಾಟುವುದು ನಿಶ್ಚಿತ.