Webdunia - Bharat's app for daily news and videos

Install App

ಬುಮ್ರಾಗೆ ಯಾರೂ ಸಪೋರ್ಟ್ ಮಾಡಿಲ್ಲ: ಸೋಲಿನ ಬಳಿಕ ಬೇಸರ ಹೊರಹಾಕಿದ ರೋಹಿತ್ ಶರ್ಮಾ

Webdunia
ಶುಕ್ರವಾರ, 29 ಡಿಸೆಂಬರ್ 2023 (09:38 IST)
ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಅಂತರದಿಂದ ಹೀನಾಯವಾಗಿ ಸೋತ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೇಸರ ಹೊರಹಾಕಿದ್ದಾರೆ.

ಮೂರೇ ದಿನಗಳಲ್ಲಿ ಪಂದ್ಯ ಮುಗಿದಿತ್ತು. ಭಾರತೀಯ ಬ್ಯಾಟಿಗರು ಆಫ್ರಿಕಾ ವೇಗದ ದಾಳಿಗೆ ತತ್ತರಿಸಿ ಹೋಗಿದ್ದರು. ಆದರೆ ಟೀಂ ಇಂಡಿಯಾ ಬೌಲರ್ ಗಳಿಂದ ಅಂತಹ ಪ್ರದರ್ಶನ ಬರಲಿಲ್ಲ. ಈ ಬಗ್ಗೆ ನಾಯಕ ರೋಹಿತ್ ಶರ್ಮಾ ಪಂದ್ಯದ ನಂತರ ಮಾತನಾಡಿದ್ದಾರೆ.

‘ಬುಮ್ರಾ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಅವರ ಗುಣಮಟ್ಟ ಎಂತಹದ್ದು ಎಂದು ನಮಗೆಲ್ಲರಿಗೂ ಗೊತ್ತು. ಆದರೆ ಅವರಿಗೆ ಇತರ ಬೌಲರ್ ಗಳಿಂದ ಸಪೋರ್ಟ್ ಬೇಕಾಗಿತ್ತು. ಅದು ಸಿಗಲೇ ಇಲ್ಲ. ಆದರೆ ಇದು ಸಹಜ. ಎಲ್ಲಾ ಬೌಲರ್ ಗಳು ಶಕ್ತಿಮೀರಿ ಪ್ರಯತ್ನಿಸಿದರು. ಆದರೆ ಯಾವುದೂ ನಮ್ಮ ಪರವಾಗಿ ಇರಲಿಲ್ಲ. ಆದರೆ ಇಂತಹ ಪಂದ್ಯಗಳು ನಮಗೆ ಪಾಠವಾಗಲಿದೆ’ ಎಂದು ಬೇಸರ ಹೊರಹಾಕಿದ್ದಾರೆ.

ಇನ್ನು ಬ್ಯಾಟಿಂಗ್ ನಲ್ಲೂ ಎರಡನೇ ಇನಿಂಗ್ಸ್ ನಲ್ಲಿ ಭಾರತದ ಪರ ವಿರಾಟ್ ಕೊಹ್ಲಿ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಇಡೀ ತಂಡ ಗಳಿಸಿದ್ದು 131  ರನ್ ಆಗಿದ್ದರೆ ಇದರಲ್ಲಿ ಕೊಹ್ಲಿ ಕೊಡುಗೆಯೇ 76 ರನ್ ಗಳಾಗಿತ್ತು. ಹಾಗಿದ್ದಲ್ಲಿ ಉಳಿದ ಬ್ಯಾಟಿಗರು ಎಷ್ಟರಮಟ್ಟಿಗೆ ವೈಫಲ್ಯ ಅನುಭವಿಸಿದ್ದರು ಎಂದು ಲೆಕ್ಕಾಚಾರ ಹಾಕಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭಮನ್ ಗಿಲ್ ಗೆ ಅನಾರೋಗ್ಯ, ಬ್ಲಡ್ ರಿಪೋರ್ಟ್ ಬಿಸಿಸಿಐಗೆ ಸಲ್ಲಿಸಿದ ಗಿಲ್

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಜೆರ್ಸಿಗೆ ಪ್ರಾಯೋಜಕರೇ ಇರಲ್ವಾ

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments