Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ಗೆಲುವಿಗಾಗಿ ವಿಘ್ನೇಶ್ವರನ ಮೊರೆ ಹೋದ ರೋಹಿತ್ ಶರ್ಮಾ

ಟಿ20 ವಿಶ್ವಕಪ್ ಗೆಲುವಿಗಾಗಿ ವಿಘ್ನೇಶ್ವರನ ಮೊರೆ ಹೋದ ರೋಹಿತ್ ಶರ್ಮಾ
ಮುಂಬೈ , ಶನಿವಾರ, 8 ಅಕ್ಟೋಬರ್ 2022 (09:20 IST)
ಮುಂಬೈ: ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ತೆರಳುವ ಮುನ್ನ ರೋಹಿತ್ ಶರ್ಮಾ ವಿಘ್ನ ವಿನಾಶಕ ವಿಘ್ನೇಶ್ವರನ ಮೊರೆ ಹೋಗಿದ್ದಾರೆ.

ಆಸ್ಟ್ರೇಲಿಯಾ ವಿಮಾನವೇರುವ ಮುನ್ನ ರೋಹಿತ್ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಪತ್ನಿ, ಮಗಳ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಬಹುದು ಎಂದು ಅಭಿಮಾನಿಗಳು ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಭಾರತಕ್ಕೆ ಐಸಿಸಿ ಈವೆಂಟ್ ಗಳಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಹೀಗಾಗಿ ಈ ಬಾರಿ ಹೊಸ ನಾಯಕತ್ವದೊಂದಿಗೆ ಯಶಸ್ಸು ಸಿಗಬಹುದು ಎಂಬ ವಿಶ್ವಾಸದಲ್ಲಿದೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ದೀಪಕ್ ಚಹರ್ ಗೆ ಗಾಯ: ಟೀಂ ಇಂಡಿಯಾಗೆ ಮತ್ತಿಬ್ಬರ ಸೇರ್ಪಡೆ