ಕೊಹ್ಲಿಗೆ ಹೇಳಿ ನಾನು ಅವರ ಅಭಿಮಾನಿ ಎಂದ ಮಹಿಳೆಗೆ ರೋಹಿತ್ ಶರ್ಮಾ ಪ್ರತಿಕ್ರಿಯೆಯ ವಿಡಿಯೋ ನೋಡಿ

Krishnaveni K
ಬುಧವಾರ, 23 ಅಕ್ಟೋಬರ್ 2024 (16:43 IST)
ಪುಣೆ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಹಿಳಾ ಅಭಿಮಾನಿಯೊಬ್ಬರು ನಡೆಸಿದ ಸಂಭಾಷಣೆಯ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪುಣೆಯಲ್ಲಿ ಈ ಘಟನೆ ನಡೆದಿದೆ.

ಪುಣೆಯಲ್ಲಿ ನಾಳೆಯಿಂದ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಾಕ್ಟೀಸ್ ನಡೆಸುತ್ತಿದೆ. ಪ್ರಾಕ್ಟೀಸ್ ವೇಳೆ ಕ್ರಿಕೆಟಿಗರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಬರುತ್ತಾರೆ. ಅದರಂತೇ ಇಂದೂ ರೋಹಿತ್ ಬಳಗದ ಅಭ್ಯಾಸ ನೋಡಲು ಅಭಿಮಾನಿಗಳು ಬಂದಿದ್ದರು.

ಈ ಪೈಕಿ ಒಬ್ಬ ಮಹಿಳೆ ರೋಹಿತ್ ಶರ್ಮಾ ಅಭ್ಯಾಸ ಮುಗಿಸಿ ಮೈದಾನದಿಂದ ತೆರಳುತ್ತಿರುವಾಗ ಅಟೋಗ್ರಾಫ್ ಗೆ ಬೇಡಿಕೆಯಿಟ್ಟಿದ್ದಾರೆ. ‘ರೋಹಿತ್ ಪ್ಲೀಸ್ ನನಗೆ ಬೇಗ ಅಟೋಗ್ರಾಫ್ ಕೊಡಿ, ತುಂಬಾ ಹಸಿವಾಗುತ್ತಿದೆ’ ಎಂದು ಮಹಿಳಾ ಅಭಿಮಾನಿ ಹೇಳಿದ್ದಾರೆ. ಅದಕ್ಕೆ ರೋಹಿತ್ ಓಕೆ ಎಂದು ಹೇಳಿ ಆಕೆಗೆ ಅಟೋಗ್ರಾಫ್ ನೀಡುತ್ತಾರೆ.

ರೋಹಿತ್ ಅಟೋಗ್ರಾಫ್ ನೀಡುತ್ತಿದ್ದಾಗ ಮಹಿಳೆ ‘ವಿರಾಟ್ ಕೊಹ್ಲಿಗೆ ಹೇಳಿ ನಾನು ಅವರ ದೊಡ್ಡ ಅಭಿಮಾನಿ. ಅವರು ಅಭ್ಯಾಸ ಮಾಡುವಾಗಲೂ ನಾನು ಮೈದಾನದಲ್ಲಿದ್ದೆ’ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ರೋಹಿತ್ ಕೂಡಾ ನಗುತ್ತಲೇ ಆಯ್ತು ಹೇಳ್ತೀನಿ ಎಂದಿದ್ದಾರೆ. ಅವರ ಸಂಭಾಷಣೆಯ ವಿಡಿಯೋ ತುಣುಕು ಇಲ್ಲಿದೆ ನೋಡಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಭಾರತ, ಆಸ್ಟ್ರೇಲಿಯಾ ವನಿತೆಯರ ಇಂದು ವಿಶ್ವಕಪ್ ಸೆಮಿಫೈನಲ್ ನಡೆಯುವುದೇ ಅನುಮಾನ

ಶ್ರೇಯಸ್ ಅಯ್ಯರ್ ಗಾಗಿ ಸೂರ್ಯ ಕುಮಾರ್ ಯಾದವ್ ತಾಯಿ ಪೂಜೆ: ಎಂಥಾ ಅನುಬಂಧ

IND vs AUS T20: ಮಳೆಗೆ ಕೊಚ್ಚಿ ಹೋದ ಮೊದಲ ಟಿ20

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಮುಂದಿನ ಸುದ್ದಿ
Show comments