ಮೊನ್ನೆ ಪತ್ನಿ, ಇಂದು ಪತಿ: ರಿತಿಕಾ ಪರ ಮಾತನಾಡಿದ ರೋಹಿತ್ ಶರ್ಮಾ

Krishnaveni K
ಶನಿವಾರ, 10 ಫೆಬ್ರವರಿ 2024 (15:06 IST)
Photo Courtesy: Instagram
ಮುಂಬೈ: ಮೊನ್ನೆಯಷ್ಟೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ ದೇ ಪತಿಯ ಪರವಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಟಾಂಗ್ ಕೊಟ್ಟು ಮಾಡಿದ ಮೆಸೇಜ್ ಎಲ್ಲೆಡೆ ವೈರಲ್ ಆಗಿತ್ತು.

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಕೆಳಗಿಳಿಸಿದ್ದಕ್ಕೆ ಕೋಚ್ ಮಾರ್ಕ್ ಬೌಷರ್ ಕಾರಣ ನೀಡಿದ್ದರು. ಈ ವೇಳೆ ಇದು ಕೇವಲ ಕ್ರಿಕೆಟಿಂಗ್ ಕಾರಣಗಳಿಗಾಗಿ ಮಾಡಿದ ಬದಲಾವಣೆ ಎಂದಿದ್ದರು. ಈ ಸಂದರ್ಶನ ವಿಡಿಯೋಗೆ ಕಾಮೆಂಟ್ ಮಾಡಿದ್ದ ರಿತಿಕಾ ಇಲ್ಲಿ ತುಂಬಾ ದೋಷಗಳಿವೆ ಎಂದು ಕಾಮೆಂಟ್ ಮಾಡಿದ್ದರು. ಆ ಮೂಲಕ ಪತಿಗೆ ಬೆಂಬಲಿಸಿ ಕೋಚ್ ಹೇಳಿಕೆಯನ್ನು ವ್ಯಂಗ್ಯ ಮಾಡಿದ್ದರು.

ಮುಂಬೈ ಯಶಸ್ವಿ ನಾಯಕನಿಗೆ ಶಾಕ್ ಕೊಟ್ಟಿದ್ದ ಫ್ರಾಂಚೈಸಿ
ತಂಡಕ್ಕೆ ಗರಿಷ್ಠ ಐಪಿಎಲ್ ಕಿರೀಟ ಗೆದ್ದುಕೊಟ್ಟಿದ್ದ ಯಶಸ್ವೀ ನಾಯಕ ರೋಹಿತ್ ಶರ್ಮಾರನ್ನು ದಿಡೀರ್ ಆಗಿ ನಾಯಕತ್ವದಿಂದ ಕೆಳಗಿಳಿಸಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿತ್ತು. ಇದು ಅಭಿಮಾನಿಗಳು, ರೋಹಿತ್ ನಿಕಟವರ್ತಿಗಳ ಆಕ್ರೋಶಕ್ಕೆ ಗುರಿಯಾಯಿತು. ಈ ವಿಚಾರದಲ್ಲಿ ರೋಹಿತ್ ಗೂ ಅಸಮಾಧಾನವಿದೆ ಎನ್ನುವುದು ಅವರ ಪತ್ನಿ ರಿತಿಕಾ ಅಸಮಾಧಾನ ವ್ಯಕ್ತಪಡಿಸಿದಾಗಲೇ ಸ್ಪಷ್ಟವಾಗಿತ್ತು.

ಮೊನ್ನೆ ರಿತಿಕಾ, ಇಂದು ರೋಹಿತ್ ಕಾಮೆಂಟ್
ಮೊನ್ನೆಯಷ್ಟೇ ರಿತಿಕಾ ಪತಿಗೆ ಬೆಂಬಲಿಸಿ ಮುಂಬೈ ಕೋಚ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು ವೈರಲ್ ಆಗಿತ್ತು. ಇದೀಗ ರೋಹಿತ್ ಶರ್ಮಾ ಪತ್ನಿಯನ್ನು ಬೆಂಬಲಿಸಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ತನ್ನ ಜೊತೆಗೇ ನಡೆದು ಬರುತ್ತಿರುವ ಪತ್ನಿಯ ಫೋಟೋ ಪ್ರಕಟಿಸಿ ‘ಯಾವತ್ತೂ ನನ್ನ ಜೊತೆಗೇ ಇರುತ್ತಾಳೆ’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಮೊನ್ನೆ ರಿತಿಕಾ ಮಾಡಿದ ಕಾಮೆಂಟ್ ನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಆದರೆ ಅಭಿಮಾನಿಗಳಿಗೆ ರೋಹಿತ್ ಯಾಕೆ ಇಂತಹದ್ದೊಂದು ಪೋಸ್ಟ್ ಹಾಕಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಮೊದಲ ಅರ್ಧಶತಕ ಗಳಿಸಿದ್ದು ಯಾರ ಬ್ಯಾಟ್ ನಲ್ಲಿ ಗೊತ್ತಾ: ಇಂಟ್ರೆಸ್ಟಿಂಗ್ ಕಹಾನಿ

ಆಡ್ಲಿ ಆಡದೇ ಇರಲಿ ಹರ್ಷಿತ್ ರಾಣಾ ಟೀಂ ಇಂಡಿಯಾ ಪರ್ಮನೆಂಟ್ ಮೆಂಬರ್: ಗಂಭೀರ್ ಫುಲ್ ಟ್ರೋಲ್

IND vs AUS: ಮತ್ತೆ ಟಾಸ್ ಸೋತ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ, ಆದ್ರೂ ಗಂಭೀರ್ ದತ್ತುಪುತ್ರನಿಗೆ ಚಾನ್ಸ್

ಭಾರತ, ಆಸ್ಟ್ರೇಲಿಯಾ ನಡುವೆ ನಾಳೆ ಕೊನೆಯ ಏಕದಿನ: ರೋಹಿತ್, ಕೊಹ್ಲಿ ಫ್ಯಾನ್ಸ್ ಗೆ ಕಾಡ್ತಿದೆ ಭಯ

ಅನುಷ್ಕಾ ಶರ್ಮಾ ಲಂಡನ್‌ ಮೋಹದಿಂದ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತಾ: ನೆಟ್ಟಿಗರ ತರಾಟೆ

ಮುಂದಿನ ಸುದ್ದಿ
Show comments