Publish Date: Wed, 13 Sep 2023 (08:30 IST)
Updated Date: Wed, 13 Sep 2023 (08:43 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ನಡೆದ ಏಷ್ಯಾ ಕಪ್ ಕ್ರಿಕೆಟ್ ಸೂಪರ್ ಫೋರ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ.
ರೋಹಿತ್ ನಿನ್ನೆಯ ಪಂದ್ಯದಲ್ಲಿ 53 ರನ್ ಗಳಿಸಿದರು. ಇದರೊಂದಿಗೆ ಅವರು ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಮತ್ತು ಆರಂಭಿಕರಾಗಿ 8 ಸಾವಿರ ರನ್ ಪೂರ್ತಿ ಮಾಡಿದರು. ವಿಶೇಷವೆಂದರೆ ಸಿಕ್ಸರ್ ಮೂಲಕವೇ ಅವರು 10 ಸಾವಿರ ರನ್ ಗಳ ಮೈಲಿಗಲ್ಲು ದಾಟಿದರು.
ಇದು ಈ ಟೂರ್ನಮೆಂಟ್ ನಲ್ಲಿ ಇದು ಅವರ ಹ್ಯಾಟ್ರಿಕ್ ಅರ್ಧಶತಕವಾಗಿದೆ. ಏಷ್ಯಾ ಕಪ್ ನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಅವರು ಅರ್ಧಶತಕ ಗಳಿಸಿದ್ದಾರೆ. ಆದರೆ ದುರದೃಷ್ಟವಶಾತ್ ಮೂರೂ ಪಂದ್ಯಗಳಲ್ಲಿ ಶತಕ ಕನಸಾಗಿಯೇ ಉಳಿಯಿತು.