ವಿಶ್ವಕಪ್ ಫೈನಲ್: ಅಂತಿಮ ಕದನಕ್ಕೆ ಮುನ್ನ ಶಾಂತ ರೋಹಿತ್

Webdunia
ಶನಿವಾರ, 18 ನವೆಂಬರ್ 2023 (21:00 IST)
ಅಹಮ್ಮದಾಬಾದ್: ಚಕ್ರವರ್ತಿಯಾಗಲು ಹೊರಟವನು ರಣಾಂಗಣದಲ್ಲಿ ಹೋರಾಡಲೇ ಬೇಕು. ಹೋರಾಟಕ್ಕೆ ಮುನ್ನ ಶಾಂತವಾಗಿ ಕುಳಿತು ಯೋಜನೆ ಹೆಣೆಯಬೇಕು. ಯೋಜನೆಗಳನ್ನು ಅಷ್ಟೇ ಕರಾರುವಾಕ್ ಆಗಿ ಜಾರಿಗೆ ತರಬೇಕು. ಇದಕ್ಕೆಲ್ಲಾ ತಾಳ್ಮೆ ಬೇಕೇ ಬೇಕು.

ಸದ್ಯಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಇದೇ ಪರಿಸ್ಥಿತಿಯಲ್ಲಿದ್ದಾರೆ. ಇಡೀ ವಿಶ್ವವೇ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂಬ ಭರವಸೆಯಲ್ಲಿದೆ. ಆ ಭರವಸೆಯನ್ನು ಹೊತ್ತು ಮೈದಾನದಲ್ಲಿ ಪ್ರಬಲ ಪ್ರತಿಸ್ಪರ್ಧಿ ವಿರುದ್ಧ ಆಡುವುದು ಸುಲಭದ ಮಾತಲ್ಲ. ಇದಕ್ಕೆ ಶಾಂತ ಚಿತ್ತ ಅತ್ಯಗತ್ಯ. ಇಂದು ಮಾಧ‍್ಯಮಗಳನ್ನು ಎದುರಿಸುವಾಗ ರೋಹಿತ್ ಮಾತಿನಲ್ಲಿ ಈ ಶಾಂತತೆ ಕಂಡುಬಂದಿತ್ತು.

‘ಇದನ್ನು ಒಂದು ಫೈನಲ್ ಪಂದ್ಯವೆಂಬ ಒತ್ತಡದೊಂದಿಗೆ ಆಡಲು ಸಾಧ‍್ಯವಿಲ್ಲ. ಈ ಪಂದ್ಯದ ಬಗ್ಗೆ ನಾವು ಅತಿಯಾದ ಉತ್ಸಾಹ ಅಥವಾ ಅತಿಯಾದ ಒತ್ತಡವನ್ನು ಮೈಮೇಲೆಳೆದುಕೊಂಡಿಲ್ಲ. ಫೈನಲ್ ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದೇನೆ ಎಂಬುದೇ ನನಗೆ ಸಂತೋಷದ ವಿಷಯ. ನಾನು ಯಾವತ್ತೂ ಇದು ಸಾಧ‍್ಯವಾಗಬಹುದು ಅಂದುಕೊಂಡಿರಲಿಲ್ಲ.

ನಾನು ನಾಯಕನಾಗಿ ತಂಡಕ್ಕೆ ಬಂದಾಗಿನಿಂದ ಈ ಒಂದು ದಿನಕ್ಕಾಗಿ ತಯಾರಿ ನಡೆಯುತ್ತಲೇ ಇತ್ತು. ಇದೀಗ ಕೂಲ್ ಆಗಿ ಎಲ್ಲವನ್ನೂ ಸರಳವಾಗಿಸಿ ಆಡುವುದು ಮುಖ್ಯ. ಗೆದ್ದರೆ ತುಂಬಾ ಸಂತೋಷವಾಗುತ್ತದೆ. ನಾವು ಸಾಕಷ್ಟು ಕಠಿಣ ಪರಿಶ್ರಮಪಟ್ಟಿದ್ದೇವೆ. ಆದರೆ ಅತಿಯಾದ ಒತ್ತಡ, ಉತ್ಸಾಹ ಮೈಮೇಲೆಳೆದುಕೊಳ್ಳಲು ಇಷ್ಟಪಡಲ್ಲ.

ಕೆಲವೊಂದು ಭಾವನೆಗಳನ್ನು ಅಡಗಿಸಿಡಲು ಸಾಧ‍್ಯವಾಗದು. ಕ್ರೀಡೆಯ ಅಂದ ಇರುವುದೇ ಅಲ್ಲಿ. ನಾನು ನನ್ನ ಹುಡುಗರಿಗೆ ವಿಶೇಷವಾಗಿ ಹೇಳಬೇಕಿರುವುದು ಏನೂ ಇಲ್ಲ. ಎಲ್ಲರೂ ಅನುಭವಿಗಳೇ. ಹೆಚ್ಚಿನವರು ವಿಶ್ವಕಪ್ ಫೈನಲ್ ಆಡಿಲ್ಲ. ಆದರೆ ನಮ್ಮಲ್ಲಿ ಕೊಹ್ಲಿ, ಅಶ್ವಿನ್‍ ಫೈನಲ್ ಆಡಿದ ಅನುಭವಿಗಳಿದ್ದಾರೆ. ಜನ ಹಲವು ವಿಚಾರ ಹೇಳುತ್ತಿರಬಹುದು. 200 ರನ್ ಮಾಡಿ, ವಿಕೆಟ್ ತೆಗೆಯಬೇಕು ಇತ್ಯಾದಿ.. ನಮ್ಮ ಹುಡುಗರು ಹೊರಗಿನ ಮಾತುಗಳು, ಒತ್ತಡಗಳು ಕಿವಿಗೆ ಬೀಳದಂತೆ ಹೆಡ್ ಫೋನ್ ಹಾಕಿಕೊಂಡಿದ್ದಾರೆ. 2011 ರಲ್ಲಿ ಏನಾಗಿತ್ತು ಎಂದೆಲ್ಲಾ ಯೋಚನೆ ಮಾಡಿಕೊಂಡು ತುಂಬಾ ಭಾವುಕರಾಗಲು ಇಷ್ಟಪಡುವುದಿಲ್ಲ.  ಈ ವಿಶ್ವಕಪ್ ಆರಂಭದಲ್ಲಿ ಯಾವ ವಾತಾವರಣ ಸೃಷ್ಟಿ ಮಾಡಿದ್ದೆವೋ ಅದೇ ವಾತಾವರಣದಲ್ಲಿ ಶಾಂತ ಚಿತ್ತರಾಗಿ ಆಡಲು ಬಯಸುತ್ತೇವೆ. ಈ ತಂಡದಲ್ಲಿ ಎಲ್ಲರೂ ಹೋಗಿ ಯದ್ವಾ ತದ್ವಾ ರನ್ ಚಚ್ಚಿ ಬರುವುದಿಲ್ಲ. ಪ್ರತಿಯೊಬ್ಬರಿಗೂ ಅವರವರ ರೋಲ್ ಇದೆ. ಅದನ್ನು ಎಲ್ಲರೂ ನಿಭಾಯಿಸುತ್ತಾರೆ. ತಂಡಕ್ಕೆ ಯಾವ ರೀತಿ ಅಗತ್ಯವೋ ಆ ರೀತಿ ಆಡುತ್ತೇವೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026: ಎರಡನೇ ಸಲ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಗೆ: ಮತ್ತೆ ಆರ್ ಸಿಬಿ, ಡೆಲ್ಲಿ ರಿಪೀಟ್ ಶೋ

Delhi vs Gujarat Giants: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ, ಬೌಲಿಂಗ್ ಆಯ್ಕೆ

T20 WC: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

ರಾಮಮಂದಿರಕ್ಕೆ ಭೇಟಿ ನೀಡಿದ ಜಹೀರ್ ಖಾನ್: ಮತಾಂತರ ಆಗ್ಬಿಡಿ ಎಂದು ಕಿಡಿ ಕಾರಿದ ಸಂಪ್ರದಾಯವಾದಿಗಳು Video

ನಾನು ಏನು ಮಾತನಾಡಬೇಕು ನೀವೇ ಹೇಳಿ ಎಂದ ರಾಹುಲ್ ಗಾಂಧಿ: ನಾನು ಸಲಹೆಗಾರನಲ್ಲ ಎಂದ ಸ್ಪೀಕರ್ Video

ಮುಂದಿನ ಸುದ್ದಿ
Show comments