Select Your Language

Notifications

webdunia
webdunia
webdunia
webdunia

ರಸ್ತೆ ಸುರಕ್ಷತೆಗಾಗಿ ಟಿ20 ಕ್ರಿಕೆಟ್: ಈ ದಿಗ್ಗಜರ ಆಟವನ್ನು ಮತ್ತೆ ನೋಡುವ ಅವಕಾಶ!

ರಸ್ತೆ ಸುರಕ್ಷತೆಗಾಗಿ ಟಿ20 ಕ್ರಿಕೆಟ್: ಈ ದಿಗ್ಗಜರ ಆಟವನ್ನು ಮತ್ತೆ ನೋಡುವ ಅವಕಾಶ!
ಮುಂಬೈ , ಗುರುವಾರ, 6 ಫೆಬ್ರವರಿ 2020 (09:45 IST)
ಮುಂಬೈ: ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಮುತ್ತಯ್ಯ ಮುರಳೀಧರನ್ ಇವರೆಲ್ಲಾ ಕ್ರಿಕೆಟ್ ಆಡುವುದನ್ನು ಇನ್ನು ಮುಂದೆ ಲೈವ್ ಆಗಿ ನೋಡುವ ಅವಕಾಶವೇ ಸಿಗದು ಎನ್ನುವವರಿಗೊಂದು ಸುವರ್ಣಾವಕಾಶ ಸಿಕ್ಕಿದೆ.


ಈ ದಿಗ್ಗಜ ಕ್ರಿಕೆಟಿಗರು ಇದೀಗ ರಸ್ತೆ ಸುರಕ್ಷತೆಗಾಗಿ ಟಿ20 ವಿಶ್ವ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು, ತಮ್ಮ ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ. ಒಟ್ಟು ಐದು ರಾಷ್ಟ್ರಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ದ.ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಶಿವನಾರಾಯಣ್ ಚಂದ್ರಪಾಲ್, ಮುತ್ತಯ್ಯ ಮುರಳೀಧರನ್ , ಬ್ರೆಟ್ ಲೀ, ತಿಲಕರತ್ನೆ ದಿಲ್ಶಾನ್ ಮುಂತಾದ ದಿಗ್ಗಜ ಕ್ರಿಕೆಟಿಗರು ಟೂರ್ನಮೆಂಟ್ ನಲ್ಲಿ ಆಡಲಿದ್ದಾರೆ. ವಯೋಕಾಮ್ 18 ಈ ಟೂರ್ನಿಯ ಅಧಿಕೃತ ಪ್ರಸಾರ ಹಕ್ಕು ಪಡೆದಿದೆ. ಕಲರ್ಸ್ ಸಿನಿಪ್ಲೆಕ್ಸ್ ನಲ್ಲಿ ಪಂದ್ಯಗಳು ನೇರಪ್ರಸಾರವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಖಾನ್-ದಾನ್ ಗಳನ್ನೂ ಮೀರಿದ ವಿರಾಟ್ ಕೊಹ್ಲಿ