T20 ವಿಶ್ವಕಪ್ ಫೈನಲ್ ನಲ್ಲಿ ಗಾಯದ ನಾಟಕದ ಬಗ್ಗೆ ಬಾಯ್ಬಿಟ್ಟ ರಿಷಭ್ ಪಂತ್ (Video)

Krishnaveni K
ಶನಿವಾರ, 12 ಅಕ್ಟೋಬರ್ 2024 (15:44 IST)
Photo Credit: X
ಮುಂಬೈ: ಟಿ20 ವಿಶ್ವಕಪ್ ಫೈನಲ್ ನಲ್ಲಿ ಕೊನೆಯ ಹಂತದಲ್ಲಿ ಗಾಯದ ನಾಟಕವಾಡಿ ಪಂದ್ಯವನ್ನು ಭಾರತದ ಪರವಾಗಿ ಆಗುವಂತೆ ಮಾಡಿದ ವಿಕೆಟ್ ಕೀಪರ್ ರಿಷಭ್ ಪಂತ್ ಈಗ ಅಂದಿನ ನಾಟಕದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಇತ್ತೀಚೆಗೆ ಕಪಿಲ್ ಶರ್ಮ ಶೋನಲ್ಲಿ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಫೈನಲ್ ಗೆಲುವಿಗೆ ರಿಷಭ್ ಪಂತ್ ನಾಟಕವೂ ಕಾರಣವಾಯ್ತು ಎಂದಿದ್ದರು. 5 ಓವರ್ ಗಳಲ್ಲಿ 30 ರನ್ ಬೇಕಾಗಿದ್ದಾಗ ಭಾರತ ಒತ್ತಡದಲ್ಲಿತ್ತು. ಆಫ್ರಿಕಾ ಸುಲಭವಾಗಿ ಪಂದ್ಯ ಗೆಲ್ಲುತ್ತಿತ್ತು.

ಆದರೆ ಬ್ಯಾಟಿಗರ ಲಹರಿ ಕಡಿದು ಹಾಕಲು ರಿಷಭ್ ಮೊಣಕಾಲಿಗೆ ಗಾಯವಾದವರಂತೆ ನಾಟಕವಾಡಿದರು. ಫಿಸಿಯೋವನ್ನು ಮೈದಾನಕ್ಕೆ ಕರೆಸಿ ಬ್ಯಾಂಡೇಜ್ ಹಾಕಿಸಿ ಹೊತ್ತು ಕಳೆದರು. ಇದರಿಂದ ಆಫ್ರಿಕಾ ವಿಚಲಿತವಾಯಿತು. ಈ ಬಗ್ಗೆ ಈಗ ಸ್ವತಃ ರಿಷಭ್ ಪಂತ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಹೀಗೇ ಆದರೆ ಆಫ್ರಿಕಾ ಪಂದ್ಯ ಗೆಲ್ಲಬಹುದು ಎನಿಸಿ ಏನಾದರೂ ಮಾಡಬೇಕು ಎಂದು ಯೋಚಿಸಿದೆ. ಫಿಸಿಯೋ ಮೈದಾನಕ್ಕೆ ಬಂದಾಗ ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ. ಸಾಧ್ಯವಾದಷ್ಟು ಸಮಯ ಹಾಳು ಮಾಡಿ, ನಿಧಾನವಾಗಿ ಬ್ಯಾಂಡೇಜ್ ಹಾಕಿ ಎಂದು ಸಲಹೆ ನೀಡಿದೆ. ಫಿಸಿಯೋ ತುಂಬಾ ನೋವಾಗುತ್ತಿದೆಯೇ ಎಂದು ಕೇಳಿದರು. ಆಗ ನಾನು ಸುಮ್ಮನೆ ನಾಟಕ ಮಾಡುತ್ತಿದ್ದೇನೆ ಎಂದೆ. ಹೀಗೆ ಪಂದ್ಯ ನಡೆಯುವುದನ್ನು ಕೊಂಚ ನಿಧಾನವಾಗಿಸುವುದರಿಂದ ಎಲ್ಲಾ ಬಾರಿಯೂ ಅನುಕೂಲವಾಗಬಹುದು ಎಂದು ಹೇಳಲು ಸಾಧ್ಯವಾಗದು. ಆದರೆ ನನ್ನ ಪ್ರಯತ್ನ ಮಾಡೋಣವೆನಿಸಿತು. ಅದು ನೆರವಿಗೆ ಬಂತು’ ಎಂದು ರಿಷಭ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಆಸ್ಟ್ರೇಲಿಯಾ ನಡುವೆ ನಾಳೆ ಕೊನೆಯ ಏಕದಿನ: ರೋಹಿತ್, ಕೊಹ್ಲಿ ಫ್ಯಾನ್ಸ್ ಗೆ ಕಾಡ್ತಿದೆ ಭಯ

ಅನುಷ್ಕಾ ಶರ್ಮಾ ಲಂಡನ್‌ ಮೋಹದಿಂದ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತಾ: ನೆಟ್ಟಿಗರ ತರಾಟೆ

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಹುದ್ದೆ

ಟೀಂ ಇಂಡಿಯಾ ಉದ್ದಾರವಾಗಬೇಕೆಂದರೆ ಈ ಇಬ್ಬರನ್ನು ಮೊದಲು ಕಿತ್ತು ಹಾಕ್ಬೇಕು

ಎರಡು ಬಾರಿ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ ಮಾಡಿದ್ದೇನು

ಮುಂದಿನ ಸುದ್ದಿ
Show comments