Publish Date: Fri, 30 Dec 2022 (09:10 IST)
Updated Date: Fri, 30 Dec 2022 (09:25 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಗೆ ಕಾರು ಅಪಘಾತವಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ದುಬೈಗೆ ತೆರಳಿದ್ದ ರಿಷಬ್ ಮನೆಗೆ ಮರಳುತ್ತಿದ್ದಾಗ ದೆಹಲಿಯಲ್ಲಿ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಉರಿದು ಭಸ್ಮವಾಗಿದೆ. ಕಾರಿನಲ್ಲಿದ್ದ ರಿಷಬ್ ಕತ್ತು, ತಲೆಗೆ ಪೆಟ್ಟು ಬಿದ್ದಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಬಾಂಗ್ಲಾ ಪ್ರವಾಸ ಮುಗಿಸಿ ಬಂದಿದ್ದ ರಿಷಬ್ ಪಂತ್ ಗೆ ಈಗ ಅಪಘಾತವಾಗಿರುವ ವಿಚಾರ ಕ್ರಿಕೆಟ್ ಲೋಕಕ್ಕೆ ಶಾಕ್ ಆಗಿದೆ.