Publish Date: Fri, 18 Jan 2019 (09:13 IST)
Updated Date: Fri, 18 Jan 2019 (09:15 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಸ್ಲೆಡ್ಜಿಂಗ್ ಮೂಲಕವೇ ಫೇಮಸ್ ಆದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಸ್ಲೆಡ್ಜಿಂಗ್ ಬಗ್ಗೆ ಮಾತನಾಡಿದ್ದಾರೆ.
ಆಸೀಸ್ ನಾಯಕ ಟಿಮ್ ಪೇಯ್ನ್ ಜತೆಗೆ ಬೇಬಿ ಸಿಟ್ಟಿಂಗ್ ಕಾಮೆಂಟ್ ಮೂಲಕ ಜನಪ್ರಿಯರಾದ ರಿಷಬ್ ಈ ರೀತಿ ಎದುರಾಳಿಗಳು ನನ್ನನ್ನು ಪ್ರಚೋದಿಸಿದರೆ ಸುಮ್ಮನೇ ಕೂರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಷಬ್ ‘ನನ್ನ ವ್ಯಕ್ತಿತ್ವವೇ ಹಾಗೆ. ಯಾರಾದರೂ ಪ್ರಚೋದಿಸಿದರೆ ಅವರಿಗೆ ತಿರುಗೇಟು ಕೊಡುತ್ತೇನೆ. ನನ್ನ ತಂಡಕ್ಕಾಗಿ ಆಡುವ ಜವಾಬ್ಧಾರಿ ನನ್ನ ಮೇಲಿದೆ. ಆದರೆ ನನಗೆ ನೀತಿ ನಿಯಮ ಗೊತ್ತು. ನಾನು ಮೌಲ್ಯಗಳಿಗೆ ಬೆಲೆ ಕೊಡುತ್ತೇನೆ. ನಾನು ಸ್ಲೆಡ್ಜಿಂಗ್ ಮಾಡಿದ್ದು ಜನರಿಗೂ ಇಷ್ಟವಾಯಿತು. ನನ್ನ ಅಮ್ಮ, ಸಹೋದರಿ ಕೂಡಾ ಇಷ್ಟಪಟ್ಟರು’ ಎಂದು ರಿಷಬ್ ನಗುತ್ತಲೇ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ