Publish Date: Fri, 18 Jan 2019 (08:16 IST)
Updated Date: Fri, 18 Jan 2019 (08:18 IST)
ಮೆಲ್ಬೋರ್ನ್: ಮತ್ತೆ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯಕ್ಕೆ ವರುಣನ ಅವಕೃಪೆ ಎದುರಾಗಿದೆ. ಈ ಸರಣಿಯಾದ್ಯಂತ ಮಳೆಯಿಂದಾಗಿ ಭಾರತಕ್ಕೆ ಭಾರೀ ನಷ್ಟವಾಗಿದೆ. ಅದರ ಜತೆಗೆ ಇಂದು ಯಾರು ಗೆಲ್ಲುತ್ತಾರೋ ಅವರಿಗೆ ಸರಣಿ ಎಂಬ ಸ್ಥಿತಿಯಲ್ಲಿರುವಾಗ ಮಳೆ ಬಂದು ಸದ್ಯಕ್ಕೆ ಆಟ ಸ್ಥಗಿತಗೊಂಡಿದೆ.
ಟಾಸ್ ಗೆದ್ದು ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಆದರೆ ಕೇವಲ ಎರಡು ಎಸೆತ ಎಸೆಯುವಷ್ಟರಲ್ಲಿ ಮಳೆ ಹನಿಯಲು ಆರಂಭವಾಗಿದ್ದು, ಪಂದ್ಯ ಸ್ಥಗಿತಗೊಂಡಿತು.
ಭಾರತ ಈ ಪಂದ್ಯಕ್ಕೆ ಭಾರೀ ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಮೊಹಮ್ಮದ್ ಸಿರಾಜ್ ಬದಲಿಗೆ ವಿಜಯ್ ಶಂಕರ್, ಕುಲದೀಪ್ ಯಾದವ್ ಸ್ಥಾನಕ್ಕೆ ಯಜುವೇಂದ್ರ ಚಾಹಲ್ ಮತ್ತು ಅಂಬಟಿ ರಾಯುಡು ಸ್ಥಾನದಲ್ಲಿ ಕೇದಾರ್ ಜಾದವ್ ಗೆ ಸ್ಥಾನ ನೀಡಿತ್ತು. ಆದರೆ ಸದ್ಯಕ್ಕೆ ಮಳೆಯಿಂದಾಗಿ ಆಟಗಾರರು ಪೆವಿಲಿಯನ್ ನಲ್ಲಿ ಕೂರುವಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ