Select Your Language

Notifications

webdunia
webdunia
webdunia
Wednesday, 9 April 2025
webdunia

ವಿರಾಟ್ ಕೊಹ್ಲಿ 100 ನೇ ಪಂದ್ಯದಲ್ಲಿ ರಿಷಬ್ ಪಂತ್ ಅಬ್ಬರ

ವಿರಾಟ್ ಕೊಹ್ಲಿ
ಮೊಹಾಲಿ , ಶುಕ್ರವಾರ, 4 ಮಾರ್ಚ್ 2022 (17:20 IST)
ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ದಿನದಂತ್ಯಕ್ಕೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದೆ.

100 ನೇ ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿ ಆರಂಭದಲ್ಲಿ ಉತ್ತಮವಾಗಿ ಆಡುತ್ತಿದ್ದರೂ 45 ರನ್ ಗಳಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಇನ್ನೊಂದೆಡೆ ಹನುಮ ವಿಹಾರಿ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದು, 58 ರನ್ ಗಳ ಕೊಡುಗೆ ನೀಡಿದರು. ಶ್ರೇಯಸ್ ಅಯ್ಯರ್ ಇನಿಂಗ್ಸ್ 27 ರನ್ ಗೇ ಕೊನೆಯಾಯ್ತು.

ಈ ಹಂತದಲ್ಲಿ ಟೀಂ ಇಂಡಿಯಾ ಕೊಂಚ ಹಿನ್ನಡೆ ಅನುಭವಿಸಿತ್ತು. ಆದರೆ ಆಗ ಕಣಕ್ಕಿಳಿದ ರಿಷಬ್ ಪಂತ್-ರವೀಂದ್ರ ಜಡೇಜಾ ಜೋಡಿ ಬೀಡು ಬೀಸಾದ ಇನಿಂಗ್ಸ್ ನಿಂದ ರಂಜಿಸಿದರು. ರಿಷಬ್ 97 ಎಸೆತಗಳಿಂದ 4 ಸಿಕ್ಸರ್, 9 ಬೌಂಡರಿಯನ್ನೊಳಗೊಂಡ 96 ರನ್ ಗಳಿಸಿ ಇನ್ನೇನು ಶತಕ ಗಳಿಸುತ್ತಾರೆನ್ನುವಾಗ ಲಕ್ಮಲ್ ಬೌಲಿಂಗ್ ನಲ್ಲಿ ಬೌಲ್ಡ್ ಆಗಿ ನಿರಾಸೆ ಅನುಭವಿಸಿದರು.

ಇದೀಗ 45 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು 10 ರನ್ ಗಳಿಸಿರುವ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

100 ನೇ ಟೆಸ್ಟ್ ನಲ್ಲಿ ಬ್ಯಾಟಿಂಗ್ ಗಿಳಿದ ಕೊಹ್ಲಿಗೆ ಬಿಗ್ ಚಿಯರ್ ಅಪ್