Select Your Language

Notifications

webdunia
webdunia
webdunia
webdunia

ರಿಯೊ ಒಲಿಂಪಿಕ್ಸ್‌ಗೆ ಐಸಿಸ್ ಜಿಹಾದಿಗಳ ಕರಿನೆರಳು

ರಿಯೊ ಒಲಿಂಪಿಕ್ಸ್‌ಗೆ ಐಸಿಸ್ ಜಿಹಾದಿಗಳ ಕರಿನೆರಳು
, ಗುರುವಾರ, 21 ಜುಲೈ 2016 (16:52 IST)
ಬ್ರೆಜಿಲ್ ರಿಯೊ ಡಿ ಜನೈರೊನಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಐಸಿಸ್ ಉಗ್ರಗಾಮಿಗಳ ಕರಿನೆರಳು ಚಾಚಿದೆ. ಜಿಹಾದಿ ಸಂದೇಶದ ಚಾನೆಲ್ಲೊಂದು  ಒಲಿಂಪಿಕ್ಸ್ ಮೇಲೆ ದಾಳಿಮಾಡುವಂತೆ ಕರೆ ನೀಡಿದ ಬಳಿಕ ಬ್ರೆಜಿಲ್ ಗುಪ್ತಚರ ಸಂಸ್ಥೆ ಎಚ್ಚೆತ್ತಿದೆ. ಮೆಸೇಜಿಂಗ್ ಆಪ್ ಟೆಲಿಗ್ರಾಂನಲ್ಲಿ ಜಿಹಾದಿ ಚಾನೆಲ್ ಕ್ರೀಡಾಕೂಟ ಮತ್ತು ವಿಸ್ತ್ರತ ಗುರಿಗಳ ಮೇಲೆ ದಾಳಿಗೆ ಕರೆನೀಡಿರುವುದಾಗಿ ಸೈಟ್ ಗುಪ್ತಚರ ಸಂಸ್ಥೆ ತಿಳಿಸಿದೆ.

''ಇನ್‌ಸ್ಪೈರ್ ದಿ ಬಿಲೀವರ್ಸ್‌''ನಲ್ಲಿ ಪೋಸ್ಟ್ ಮಾಡಲಾದ ಸಂದೇಶದಲ್ಲಿ ಜಗತ್ತಿನ ಯಾವಕಡೆಯಿಂದಲಾದರೂ ಏಕಾಂಗಿ ತೋಳ ಬ್ರೆಜಿಲ್‌ಗೆ ತೆರಳಬಹುದು ಎಂದು ಹೇಳಿದೆ. ಪಾಶ್ಚಿಮಾತ್ಯ ಅಥ್ಲೀಟ್‌ಗಳು ಸೇರಿದಂತೆ ಜಿಹಾದಿ ಶತ್ರುಗಳ ಮೇಲೆ ಗುರಿಯಿಡಲು ಕ್ರೀಡಾಕೂಟ ಬಳಸಿಕೊಳ್ಳುವಂತೆ ಸಂದೇಶದಲ್ಲಿ ಸಲಹೆ ನೀಡಲಾಗಿದೆ.
 
ಈ  ನಡುವೆ ಬ್ರೆಜಿಲ್‌ನಲ್ಲಿ ಜಿಹಾದಿ ಚಟುವಟಿಕೆ ಮತ್ತು ಯಾವುದೇ ಸ್ಥಿರ ಭಯೋತ್ಪಾದನೆ ಜಾಲಗಳ ಇತಿಹಾಸವಿಲ್ಲ ಎಂದು ಭದ್ರತಾ ತಜ್ಞರು ಹೇಳಿದ್ದು, ಒಲಿಂಪಿಕ್ಸ್‌ನಲ್ಲಿ ಸಂಕೀರ್ಣ ದಾಳಿ ಮಾಡುವುದು ಕಷ್ಟ ಎಂದಿದ್ದಾರೆ. ಆದಾಗ್ಯೂ ಅನೇಕ ನಗರಗಳ ರೀತಿಯಲ್ಲಿ ಒಬ್ಬ ವ್ಯಕ್ತಿ ಅಥವಾ ಏಕಾಂಗಿ ತೋಳನ ಬೆದರಿಕೆಯನ್ನು ರಿಯೊ ಎದುರಿಸುತ್ತಿದೆ.
 
 ಕ್ರೀಡಾಕೂಟಕ್ಕೆ 85000 ಪೊಲೀಸರು, ಸೈನಿಕರು ಮತ್ತು ಅಗ್ನಿಶಾಮಕದಳ ಕರ್ತವ್ಯದಲ್ಲಿ ನಿರತವಾಗಿವೆ. ಲಂಡನ್‌ನಲ್ಲಿ ನಾಲ್ಕುವರ್ಷಗಳ ಕೆಳಗೆ ನಿಯೋಜಿಸಿದ ಸಂಖ್ಯೆಗಿಂತ ಇದು ಎರಡು ಪಟ್ಟಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿರು ಓವರುಗಳ ಕ್ರಿಕೆಟ್‌ ಯಶಸ್ಸಿನ ಬಳಿಕ ಟೆಸ್ಟ್‌ಗಳಲ್ಲಿ ಮಿಂಚಲು ಕೊಹ್ಲಿಗೆ ಸಕಾಲ