Daily Horoscope
✕

ಬಡ ಕ್ರಿಕೆಟಿಗರಿಗೆ ನೆರವಾಗಲು ರಿಂಕು ಸಿಂಗ್ ಮಾಸ್ಟರ್ ಪ್ಲ್ಯಾನ್: ಕಷ್ಟದ ಹಾದಿ ಮರೆತಿಲ್ಲ ಕ್ರಿಕೆಟಿಗ!

Webdunia
ಶುಕ್ರವಾರ, 8 ಡಿಸೆಂಬರ್ 2023 (09:41 IST)
ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಯುವ ಸೆನ್ಸೇಷನಲ್ ಕ್ರಿಕೆಟರ್ ಆಗಿರುವ ರಿಂಕು ಸಿಂಗ್ ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಡುತ್ತಿದ್ದಾರೆ.

ಫಿನಿಶಿಂಗ್ ಶೈಲಿಯ ಮೂಲಕವೇ ಭಾರತ ಟಿ20 ತಂಡದಲ್ಲಿ ಸ್ಥಾನ ಖಾಯಂ ಮಾಡಿಕೊಂಡಿರುವ ರಿಂಕು ಸಿಂಗ್ ಬಡತನದಲ್ಲಿ ಅರಳಿದ ಪ್ರತಿಭೆ. ಬಡ ಕುಟುಂಬದಿಂದ ಬಂದ ರಿಂಕು ಸಿಂಗ್ ಇಂದು ಟೀಂ ಇಂಡಿಯಾದಲ್ಲಿ ಮಿಂಚುತ್ತಿದ್ದಾರೆ.

ಆದರೆ ಅವರು ತಮ್ಮ ಬಂದ ಹಾದಿಯನ್ನು ಮರೆತಿಲ್ಲ. ಇದೀಗ ರಿಂಕು ತಮ್ಮಂತೇ ಕಷ್ಟದಲ್ಲಿರುವ, ಬಡತನದಿಂದಾಗಿ ಕ್ರಿಕೆಟ್ ಗೆ ಬೇಕಾದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗದ ಪ್ರತಿಭೆಗಳ ನೆರವಿಗೆ ಮುಂದೆ ಬಂದಿದ್ದಾರೆ.

ತಮ್ಮ ಊರು ಆಲಿಘಡ್ ನಲ್ಲಿ ಬಡ ಕ್ರಿಕೆಟ್ ಆಟಗಾರರಿಗೆ ಉಪಯೋಗವಾಗುವಂತೆ 50 ಲಕ್ಷ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದಾರೆ. ಅದೀಗ ನಿರ್ಮಾಣ ಹಂತದಲ್ಲಿದ್ದು, ಮುಂದಿನ ವರ್ಷ ಲೋಕಾರ್ಪಣೆಯಾಗಲಿದೆ. ಕಳೆದ ಐಪಿಎಲ್ ವೇಳೆ ರಿಂಕು ಸಿಂಗ್ ತಮ್ಮ ಕನಸಿನ ಯೋಜನೆ ಬಗ್ಗೆ ಹೇಳಿಕೊಂಡಿದ್ದರು. ಅದೀಗ ಮುಕ್ತಾಯ ಹಂತದಲ್ಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಭಾರತ vs ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯ: ಪಂದ್ಯದ ಸಮಯ, ನೇರ ಪ್ರಸಾರ ವಿವರ

ಪ್ರಧಾನಿ ಮೋದಿ ಮುಂದೆ ಚೆಂದದ ಕನ್ನಡದ ಭಜನೆ ಹಾಡಿದ ಸೂರ್ಯಕುಮಾರ್ ಯಾದವ್ ಮನೆ ಹುಡುಗಿ: ಕ್ಯೂಟ್ Video ನೋಡಿ

ಭಾರತ vs ನ್ಯೂಜಿಲ್ಯಾಂಡ್ 1st ODI: ವಿರಾಟ್ ಕೊಹ್ಲಿ ಅರ್ಧಶತಕದ ಅಬ್ಬರ, 5 ವಿಕೆಟ್‌ಗಳಿಂದ ಕಿವೀಸ್ ಪರಾಭವ

ಭಾರತ vs ನ್ಯೂಜಿಲೆಂಡ್ 1st ODI: 185 ರನ್‌ಗಳಿಗೆ ಕಿವೀಸ್ ಸರ್ವಪತನ

ಭಾರತ ಮತ್ತು ನ್ಯೂಜಿಲೆಂಡ್ ಏಕದಿನ ಸರಣಿ 2026: ಪಂದ್ಯಗಳ ವೇಳಾಪಟ್ಟಿ ಮತ್ತು ನೇರಪ್ರಸಾರ ವಿವರ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments