Select Your Language

Notifications

webdunia
webdunia
webdunia
webdunia

ಬ್ರಿಯಾನ್ ಲಾರಾ ಅವರ ಈ ದಾಖಲೆಯನ್ನು ಇದುವರೆಗೆ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ!

ಬ್ರಿಯಾನ್ ಲಾರಾ ಅವರ ಈ ದಾಖಲೆಯನ್ನು ಇದುವರೆಗೆ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ!
ನವದೆಹಲಿ , ಗುರುವಾರ, 7 ಡಿಸೆಂಬರ್ 2023 (13:25 IST)
Photo Courtesy: Twitter
ನವದೆಹಲಿ: ಜಾಗತಿಕ ಕ್ರಿಕೆಟ್ ನಲ್ಲಿ ಇತ್ತೀಚೆಗೆ ಏಕದಿನ ಪಂದ್ಯಗಳಲ್ಲೂ ಡಬಲ್ ಸೆಂಚುರಿ ಸಾಮಾನ್ಯವಾಗುತ್ತಿದೆ. ಹಾಗಿದ್ದರೂ ಬ್ರಿಯಾನ್ ಲಾರಾ ಮಾಡಿದ್ದ ಈ ದಾಖಲೆಯನ್ನು ಇದುವರೆಗೆ ಯಾರಿಗೂ ಮುರಿಯಲು ಸಾಧ‍್ಯವಾಗಿಲ್ಲ.

ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ಇನಿಂಗ್ಸ್ ನಲ್ಲಿ ಗರಿಷ್ಠ ಸ್ಕೋರ್ ಮಾಡಿದ ದಾಖಲೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 400 ರನ್ ಗಳಿಸಿದ ಏಕೈಕ ಕ್ರಿಕೆಟಿಗ ಲಾರಾ.

ಇದುವರೆಗೆ ಎಷ್ಟೇ ಹೊಡೆಬಡಿಯ, ಪ್ರತಿಭಾವಂತ ಬ್ಯಾಟಿಗರು ಬಂದು ಹೋದರೂ, ಲಾರಾ ದಾಖಲೆಯನ್ನು ಮುರಿಯಲು ಇದುವರೆಗೆ ಯಾರಿಂದಲೂ ಸಾಧ‍್ಯವಾಗಿಲ್ಲ.

ಆದರೆ ಇದೀಗ ಸಂದರ್ಶನವೊಂದರಲ್ಲಿ ಬ್ರಿಯಾನ್ ಲಾರಾ ನನ್ನ ಈ ದಾಖಲೆಯನ್ನು ಮುರಿಯಲು ಸಾಮರ್ಥ್ಯವಿರುವ ಏಕೈಕ ಆಟಗಾರನೆಂದರೆ ಶುಬ್ಮನ್ ಗಿಲ್ ಎಂದಿದ್ದಾರೆ. ಏಕದಿನ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿರುವ ಗಿಲ್ ಮುಂದೆ ಟೆಸ್ಟ್ ಕ್ರಿಕೆಟ್ ನಲ್ಲಿ 400 ರನ್ ಗಳಿಸುವ ಸಾಮರ್ಥ್ಯವಿರುವ ಆಟಗಾರ ಎಂದು ಲಾರಾ ಹೇಳಿದ್ದಾರೆ. ಲಾರಾ ಮಾತನ್ನು ಗಿಲ್ ನಿಜ ಮಾಡುತ್ತಾರಾ ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿಯಲ್ಲಿ ವನಿತೆಯರ ಐಪಿಎಲ್