Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಚಾಂಪಿಯನ್ ಗಳನ್ನೇ ಹೊಸಕಿ ಇರಾನಿ ಟ್ರೋಫಿ ಗೆದ್ದ ಶೇಷ ಭಾರತ

ರಣಜಿ ಟ್ರೋಫಿ ಚಾಂಪಿಯನ್ ಗಳನ್ನೇ  ಹೊಸಕಿ ಇರಾನಿ ಟ್ರೋಫಿ ಗೆದ್ದ ಶೇಷ ಭಾರತ
ಮುಂಬೈ , ಮಂಗಳವಾರ, 24 ಜನವರಿ 2017 (11:01 IST)
ಮುಂಬೈ:  ಪ್ರತಿಷ್ಠಿತ ಇರಾನಿ ಟ್ರೋಫಿ ಪಂದ್ಯಾವಳಿಯಲ್ಲಿ ಈ ಬಾರಿಯ ರಣಜಿ ಟ್ರೋಫಿ ಚಾಂಪಿಯನ್ ಗುಜರಾತ್ ತಂಡವನ್ನು ಶೇಷ ಭಾರತ 6 ವಿಕೆಟ್ ಗಳಿಂದ ಸೋಲಿಸಿದೆ.  ಇದರೊಂದಿಗೆ ರಣಜಿ ಚಾಂಪಿಯನ್ ಗಳಿಗೆ ಮುಖ ಭಂಗವಾದಂತಾಗಿದೆ.
 

ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್ ನಲ್ಲಿ ಗೆಲುವಿಗೆ 379 ರನ್ ಗಳ ಗುರಿ ಪಡೆದಿದ್ದ ಶೇಷ ಭಾರತ ನಾಯಕ ಚೇತೇಶ್ವರ ಪೂಜಾರ ಆಟದ ನೆರವಿನಿಂದ ಗೆಲುವಿನ ನಗೆ ಬೀರಿತು. ಮೊದಲ ಇನಿಂಗ್ಸ್ ನಲ್ಲಿ 132 ರನ್ ಗಳ ಮುನ್ನಡೆ ಪಡೆದಿದ್ದ ಗುಜರಾತ್ ಸುಲಭವಾಗಿ ಗೆಲ್ಲುವುದೆಂಬ ಊಹೆ ಎಲ್ಲರದ್ದಾಗಿತ್ತು. ಆದರೆ ಪೂಜಾರ ಎರಡೂ ಇನಿಂಗ್ಸ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಪೂಜಾರ ಮೊದಲ ಇನಿಂಗ್ಸ್ ನಲ್ಲಿ 86 ರನ್ ಗಳಿಸಿದ್ದರೆ ದ್ವಿತೀಯ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ನಾಯಕ, ಅಜೇಯವಾಗಿ 116 ರನ್ ಗಳಿಸಿದ್ದರು. ಆದರೆ ಕನ್ನಡಿಗ ಕರುಣ್ ನಾಯರ್ ಎರಡೂ ಇನಿಂಗ್ಸ್ ಗಳಲ್ಲಿ ದಯನೀಯ ವೈಫಲ್ಯ ಕಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫಾರ್ಮ್ ಕಂಡುಕೊಳ್ಳಲು ಈಗ ಹರ್ಭಜನ್ ಗೆ ದೇಸೀ ಕ್ರಿಕೆಟೇ ಗತಿ