Select Your Language

Notifications

webdunia
webdunia
webdunia
webdunia

ಫಾರ್ಮ್ ಕಂಡುಕೊಳ್ಳಲು ಈಗ ಹರ್ಭಜನ್ ಗೆ ದೇಸೀ ಕ್ರಿಕೆಟೇ ಗತಿ

ಫಾರ್ಮ್ ಕಂಡುಕೊಳ್ಳಲು ಈಗ ಹರ್ಭಜನ್ ಗೆ ದೇಸೀ ಕ್ರಿಕೆಟೇ ಗತಿ
NewDelhi , ಮಂಗಳವಾರ, 24 ಜನವರಿ 2017 (10:29 IST)
ನವದೆಹಲಿ:  ಶತಾಯ ಗತಾಯ ಟೀಂ ಇಂಡಿಯಾಕ್ಕೆ ಮರಳಲು ಪ್ರಯತ್ನ ನಡೆಸುತ್ತಿರುವ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಗೆ ಒಂದು ವೇದಿಕೆ ಸಿಕ್ಕಿದೆ. ಟಿ-ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಅವರೀಗ ಪಂಜಾಬ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದು, ಫಾರ್ಮ್ ಕಂಡುಕೊಳ್ಳಲು ವೇದಿಕೆ ಸಿಕ್ಕಂತಾಗಿದೆ.
 

ಜನವರಿ 29 ರಿಂದ ಆರಂಭವಾಗಲಿರುವ ದೇಶೀಯ ಟಿ-ಟ್ವೆಂಟಿ ಕ್ರಿಕೆಟ್ ಕೂಟದಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಲಿದ್ದಾರೆ. ಜತೆಗೆ ತಾವೂ ತಮ್ಮ ಫಾರ್ಮ್ ಕಂಡುಕೊಳ್ಳುವ ವೇದಿಕೆಯಾಗಿ ಬಳಸಿಕೊಳ್ಳಲಿದ್ದಾರೆ.

ತಮ್ಮ ಜತೆಗಾರ ಯುವರಾಜ್ ಸಿಂಗ್ ಟೀಂ ಇಂಡಿಯಾಕ್ಕೆ ಮರಳಿರುವುದರಿಂದ ಸ್ಪೂರ್ತಿ ಪಡೆದಿರುವ ಭಜಿ ತಾವೂ ರಾಷ್ಟ್ರೀಯ ತಂಡಕ್ಕೆ ಮರಳಲು ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುವುದಾಗಿ ಹೇಳಿದ್ದರು. ಅದೇ ರೀತಿ ಇದೀಗ ಸಣ್ಣ ಅವಕಾಶಗಳನ್ನೂ ಮಿಸ್ ಮಾಡಿಕೊಳ್ಳದೇ ಬಳಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮತ್ತೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ವೇಳೆಗೆ ತಂಡಕ್ಕೆ ಮರಳುವ ವಿಶ್ವಾಸ ಅವರದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗ ಕೆಎಲ್ ರಾಹುಲ್ ಬದಲು ಶಿಖರ್ ಧವನ್ ಆರಂಭಿಕರಾಗಲಿ ಎಂದ ಸುನಿಲ್ ಗವಾಸ್ಕರ್