RCB vs PBKS match: ಪ್ಲೇ ಆಫ್ ಪಂದ್ಯಕ್ಕೆ ಆರ್ ಸಿಬಿಯಲ್ಲಿ ಇಂದು ಈ ಬದಲಾವಣೆ ಖಚಿತ

Krishnaveni K
ಗುರುವಾರ, 29 ಮೇ 2025 (08:30 IST)
Photo Credit: X
ಚಂಢೀಘಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಇಂದು ಐಪಿಎಲ್ 2025 ರ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಆರ್ ಸಿಬಿಯಲ್ಲಿ ಎರಡು ಬದಲಾವಣೆ ಖಚಿತವಾಗಿದೆ.

ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿ ಕ್ವಾಲಿಫೈಯರ್ ಗೆ ಅರ್ಹತೆ ಪಡೆದ ಆರ್ ಸಿಬಿ ದಾಖಲೆ ಮಾಡಿತ್ತು. ಇದೀಗ ಅದೇ ಆತ್ಮವಿಶ್ವಾಸದಲ್ಲಿ ಈ ಕೂಟದಲ್ಲಿ ಪ್ರಬಲ ಪಡೆ ಎನಿಸಿಕೊಂಡಿರುವ ಪಂಜಾಬ್ ವಿರುದ್ಧ ಆಡಲಿದೆ.

ಲೀಗ್ ಹಂತದಲ್ಲಿ ಈಗಾಗಲೇ ಪಂಜಾಬ್ ವಿರುದ್ಧ ಆರ್ ಸಿಬಿ ಒಮ್ಮೆ ಸೋತು ಮತ್ತೊಮ್ಮೆ ಗೆದ್ದಿದೆ. ಆದರೆ ಪ್ಲೇ ಆಫ್ ಹಂತದಲ್ಲಿ ಇದು ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಕೂಡಾ ಈ ಬಾರಿ ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆ ಹೊತ್ತು ಕಣಕ್ಕಿಳಿಯುತ್ತಿದೆ.

ಇಂದಿನ ಪಂದ್ಯಕ್ಕೆ ಆರ್ ಸಿಬಿ ತಂಡದಲ್ಲಿ ಎರಡು ಬದಲಾವಣೆಗಳಾಗಬಹುದು. ಗಾಯಗೊಂಡಿರುವ ನಾಯಕ ರಜತ್ ಪಾಟೀದಾರ್ ಇಂಪ್ಯಾಕ್ಟ್ ಪ್ಲೇಯರ್ ಆಗಿಯಾದರೂ ಕಣಕ್ಕಿಳಿಯಬಹುದು. ಇನ್ನು ವೇಗಿ ಜೋಶ್ ಹೇಝಲ್ ವುಡ್ ಈ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡುವ ಸಾಧ್ಯತೆಯಿದೆ. ಟಿಮ್ ಡೇವಿಡ್ ಫಿಟ್ ಆದರೆ ಪ್ಲಾಪ್ ಆಗಿರುವ ಲಿಯಾಮ್ ಲಿವಿಂಗ್ ಸ್ಟೋನ್ ತಂಡದಿಂದ ಹೊರಬೀಳಬಹುದು. ಉಳಿದಂತೆ ಹೆಚ್ಚಿನ ಬದಲಾವಣೆ ಸಾಧ್ಯತೆಯಿಲ್ಲ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಭಿಷೇಕ್ ಶರ್ಮಾ ಹ್ಯಾಟ್ರಿಕ್‌ ಡಕ್‌ ಔಟ್‌: ಅನಗತ್ಯ ದಾಖಲೆ ಮಾಡಿದ ವಿಶ್ವನ ನಂಬರ್‌ ಒನ್‌ ಬ್ಯಾಟರ್‌

T20 World Cup: ನಮೀಬಿಯಾವನ್ನು ಮಣಿಸಿದ ಸೂಪರ್‌ 8 ಸುತ್ತಿಗೆ ಲಗ್ಗೆ ಹಾಕಿದ ಪಾಕಿಸ್ತಾನ

T20 WC: ಡಚ್ಚರ ವಿರುದ್ಧ ಟಾಸ್‌ ಗೆದ್ದ ಸೂರ್ಯಕುಮಾರ್‌: ಭಾರತ ತಂಡದಲ್ಲಿ ಮಹತ್ವದ ಬದಲಾವಣೆ

ಟಿ20 WC: ಸೂಪರ್‌ 8ರಲ್ಲಿ ಭಾರತಕ್ಕೆ ಕಠಿಣ ಪರೀಕ್ಷೆ: ಪ್ರಬಲ ದಕ್ಷಿಣ ಆಫ್ರಿಕಾ ಮೊದಲ ಎದುರಾಳಿ

ಆಸ್ಟ್ರೇಲಿಯಾ ಇಲ್ಲದ ಟಿ20 ವಿಶ್ವಕಪ್ ಸೂಪರ್ 8: ಅದೊಂದು ಅಹಂಕಾರವೇ ಅವನತಿಗೆ ಕಾರಣವಾ

ಮುಂದಿನ ಸುದ್ದಿ
Show comments