Webdunia - Bharat's app for daily news and videos

Install App

RCB vs PBKS Final: ಆರ್ ಸಿಬಿ ವರ್ಸಸ್ ಪಂಜಾಬ್ ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಯಾರಿಗೆ ಕಪ್

Krishnaveni K
ಮಂಗಳವಾರ, 3 ಜೂನ್ 2025 (08:31 IST)
Photo Credit: X
ಅಹಮ್ಮದಾಬಾದ್: ಐಪಿಎಲ್ 2025 ರ ಫೈನಲ್ ಪಂದ್ಯ ಇಂದು ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಬಂದರೆ ಕಪ್ ಯಾರ ಪಾಲಾಗುತ್ತದೆ ಇಲ್ಲಿದೆ ನೋಡಿ ಲೆಕ್ಕಾಚಾರ.

ಎರಡೂ ತಂಡಗಳಿಗೆ ಈಗ ಕಪ್ ಗೆಲ್ಲುವುದು ತುಂಬಾ ಮುಖ್ಯ. ಯಾಕೆಂದರೆ 17 ಆವೃತ್ತಿಗಳು ಕಳೆದರೂ ಇದುವರೆಗೆ ಈ ಎರಡೂ ತಂಡಕ್ಕೂ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಈ ಫೈನಲ್ ಪಂದ್ಯವನ್ನು ಗೆಲ್ಲಲು ಎರಡೂ ತಂಡಗಳೂ ಶಕ್ತಿ ಮೀರಿ ಹೋರಾಟ ನಡೆಸಲಿವೆ.

ಫೈನಲ್ ಪಂದ್ಯ ನಡೆಯುತ್ತಿರುವುದು ಗುಜರಾತ್ ಅಹಮ್ಮದಾಬಾದ್ ಮೈದಾನದಲ್ಲಿ. ಎಲಿಮಿನೇಟರ್ ಪಂದ್ಯವೂ ಇಲ್ಲಿಯೇ ನಡೆದಿತ್ತು. ಈ ಪಂದ್ಯಕ್ಕೆ ಮಳೆ ಅಡಚಣೆಯಾಗಿತ್ತು. ಹೀಗಾಗಿ ಫೈನಲ್ ಪಂದ್ಯಕ್ಕೆ ಮಳೆ ಬರಬಹುದೇ ಎಂಬ ಆತಂಕ ಅಭಿಮಾನಿಗಳಲ್ಲಿದೆ.

ಸದ್ಯದ ಹವಾಮಾನ ವರದಿಗಳ ಪ್ರಕಾರ ಇಂದು ಅಹಮ್ಮದಾಬಾದ್ ನಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಅದರ ಹೊರತಾಗಿಯೂ ಮಳೆ ಬಂದರೆ ಜೂನ್ 4 ಮೀಸಲು ದಿನದಲ್ಲಿ ಪಂದ್ಯ ನಡೆಯುವುದು. ಈ ದಿನವೂ ಮಳೆ ಬಂದರೆ ಲೀಗ್ ಹಂತದಲ್ಲಿ ಅತೀ ಹೆಚ್ಚು ಅಂಕ ಪಡೆದು ಅಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ವಿಜೇತ ಎಂದು ಘೋಷಿಸಲಾಗುತ್ತದೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಬರುವ ಸಾಧ್ಯತೆಯಿಲ್ಲ ಎನ್ನಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲಂಡನ್ ನಲ್ಲಿ ಮಾಡಿದ್ರೇನು, ವಯಸ್ಸಾದ್ರೇನು ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್ ರಿಸಲ್ಟ್ ನೋಡಿ

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಈ ರೀತಿ ಆಡುವುದು ಇದೇ ಫಸ್ಟ್

ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಮೂರು ತಿಂಗಳ ಬಳಿಕ ಕೊನೆಗೂ ಮೌನ ಮುರಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಮಾತ್ರ ಏನು ಸ್ಪೆಷಲ್ಲಾ.. ಲಂಡನ್ ವಾಸಿ ಕೊಹ್ಲಿಗೆ ಅಲ್ಲಿಯೇ ಫಿಟ್ನೆಸ್ ಟೆಸ್ಟ್

ವಿಷ್ಣುವರ್ಧನ್ ಗೆ ಕರ್ನಾಟಕ ರತ್ನಕ್ಕೆ ಹೆಚ್ಚಿದ ಒತ್ತಡ: ಇಂದು ಸಿಎಂ ಭೇಟಿ ಮಾಡಲಿರುವ ಭಾರತಿ ವಿಷ್ಣುವರ್ಧನ್

ಮುಂದಿನ ಸುದ್ದಿ
Show comments