RCB vs GT: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಆರ್ ಸಿಬಿ ಪಂದ್ಯಕ್ಕೆ ಮಳೆಯಾಗುತ್ತಾ

Krishnaveni K
ಬುಧವಾರ, 2 ಏಪ್ರಿಲ್ 2025 (09:28 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಇಂದು ನಡೆಯಲಿರುವ ಗುಜರಾತ್ ಟೈಟನ್ಸ್ ವಿರುದ್ಧದ ಆರ್ ಸಿಬಿ ಪಂದ್ಯಕ್ಕೆ ಮಳೆಯಾಗಲಿದೆಯೇ? ಇದೀಗ ಹವಾಮಾನ ವರದಿಗಳು ಆತಂಕ ಹುಟ್ಟಿಸುವಂತಿದೆ.

ಇಂದು ಸಂಜೆ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಮತ್ತು ಗುಜರಾತ್ ನಡುವೆ ಪಂದ್ಯ ನಡೆಯಲಿದೆ. ತವರಿನಲ್ಲಿ ಆರ್ ಸಿಬಿ ಆಡುತ್ತಿರುವ ಮೊದಲ ಪಂದ್ಯವಿದು. ಹೀಗಾಗಿ ಈಗಾಗಲೇ ಅಭಿಮಾನಿಗಳು ಟಿಕೆಟ್ ಖರೀದಿಸಿ ಮ್ಯಾಚ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

ಇಂದಿನ ಪಂದ್ಯಕ್ಕೆ ಸ್ಟೇಡಿಯಂ ಭರ್ತಿಯಾಗಲಿದೆ. ಯಾಕೆಂದರೆ ಈಗಾಗಲೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಆದರೆ ಇದೀಗ ಹವಾಮಾನ ಬದಲಾವಣೆ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ. ನಿನ್ನೆ ಮಧ್ಯಾಹ್ನದ ಬಳಿಕ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು.

ಇಂದಿನ ಹವಾಮಾನ ವರದಿ ಪ್ರಕಾರವೂ ಮೋಡ ಕಂಡುಬರಲಿದೆ. ಹೀಗಾಗಿ ಮಳೆಯಾಗುತ್ತಾ ಎಂಬ ಆತಂಕವಿದೆ. ಆದರೆ ಹವಾಮಾನ  ವರದಿ ಪ್ರಕಾರ ಮಳೆಯಾಗುವ ಸಾಧ್ಯತೆ ಕಡಿಮೆ. ಆದರೆ ಮೋಡ ಕವಿದ ವಾತಾವರಣವಿರಲಿದ್ದು, ಮಳೆ ಬಂದರೂ ಪಂದ್ಯಕ್ಕೆ ಅಡ್ಡಿಯಾಗುವಷ್ಟು ಬರಲ್ಲ ಎನ್ನುವುದೇ ಸಮಾಧಾನಕರ ವಿಷಯವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಮುಂದಿನ ಸುದ್ದಿ
Show comments