Webdunia - Bharat's app for daily news and videos

Install App

IPL 2025 RCB vs GT: ತವರಿನ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾ ಆರ್ ಸಿಬಿ

Krishnaveni K
ಬುಧವಾರ, 2 ಏಪ್ರಿಲ್ 2025 (08:47 IST)
ಬೆಂಗಳೂರು: ಐಪಿಎಲ್ 2025 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ ಸಿಬಿ ಆಡಲಿದೆ.

ಈಗಾಗಲೇ ಆಡಿದ ಎರಡೂ ಪಂದ್ಯಗಳಲ್ಲಿ ಆರ್ ಸಿಬಿ ಗೆಲುವು ಸಾಧಿಸಿದ್ದು ಇದೀಗ ತವರಿನಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಬಾರಿ ತಂಡದ ಕಾಂಬಿನೇಷನ್ ನೋಡುತ್ತಿದ್ದರೆ ಎಂದಿಗಿಂತ ಬೆಸ್ಟ್ ಟೀಂ ಎನಿಸುತ್ತಿದೆ. ಹೀಗಾಗಿ ಈ ಬಾರಿ ಅಭಿಮಾನಿಗಳ ನಿರೀಕ್ಷೆಯೂ ಉನ್ನತ ಮಟ್ಟದಲ್ಲಿದೆ.

ಆರ್ ಸಿಬಿಗೆ ಕಳೆದ ಎರಡೂ ಪಂದ್ಯಗಳಲ್ಲಿ ಸ್ವತಃ ನಾಯಕ ರಜತ್ ಪಾಟೀದಾರ್ ಉತ್ತಮ ಬ್ಯಾಟಿಂಗ್ ಮೂಲಕ ಆಧಾರವಾಗಿದ್ದಾರೆ. ಇನ್ನು, ಆರಂಭಿಕ ಫಿಲ್ ಸಾಲ್ಟ್ ಸ್ಪೋಟಕ ಆರಂಭ ನೀಡುತ್ತಿದ್ದು, ಅವರಿಗೆ ಕೊಹ್ಲಿ ಸಾಥ್ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕೊಹ್ಲಿ ಕೊಂಚ ನಿಧಾನಿಯಾಗಿದ್ದರೂ ತವರಿನ ಪ್ರೇಕ್ಷಕರ ಮುಂದೆ ಅವರ ಬ್ಯಾಟ್ ಸಿಡಿಯುವ ನಿರೀಕ್ಷೆಯಿದೆ.

ಇನ್ನು ಬೌಲಿಂಗ್ ನಲ್ಲೂ ಭುವನೇಶ್ವರ್ ಕುಮಾರ್, ಜೋಶ್ ಹೇಝಲ್ ವುಡ್, ಕೃನಾಲ್ ಪಾಂಡ್ಯರಂತಹ  ಅತ್ಯುತ್ತಮ ಬೌಲಿಂಗ್ ಪಡೆಯೇ ಆರ್ ಸಿಬಿ ಬಳಿಯಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಸಾಮಾನ್ಯವಾಗಿ ರನ್ ಹೊಳೆ ಹರಿಯುತ್ತದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಬ್ಯಾಟಿಗರು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಅತ್ತ ಗುಜರಾತ್ ತಂಡದಲ್ಲಿ ನಾಯಕ ಶುಬ್ಮನ್ ಗಿಲ್ ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮಿಂಚುವ ನಿರೀಕ್ಷೆಯಿದೆ. ಇನ್ನು ಬೌಲಿಂಗ್ ನಲ್ಲಿ ಆರ್ ಸಿಬಿಯಲ್ಲೇ ಬೆಳೆದ ಪ್ರತಿಭೆ ಮೊಹಮ್ಮದ್ ಸಿರಾಜ್ ಈಗ ಗುಜರಾತ್ ತಂಡದಲ್ಲಿರುವುದು ಆ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ವಿರಾಟ್ ಕೊಹ್ಲಿ 7 ವರ್ಷದ ಹಳೆಯ ಟ್ವೀಟ್ ವೈರಲ್: ಅಂತಹದ್ದೇನಿದೆ ಅದರಲ್ಲಿ

ಮುಂದಿನ ಸುದ್ದಿ
Show comments