ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಇಂದು ನಡೆಯಲಿರುವ ಗುಜರಾತ್ ಟೈಟನ್ಸ್ ವಿರುದ್ಧದ ಆರ್ ಸಿಬಿ ಪಂದ್ಯಕ್ಕೆ ಮಳೆಯಾಗಲಿದೆಯೇ? ಇದೀಗ ಹವಾಮಾನ ವರದಿಗಳು ಆತಂಕ ಹುಟ್ಟಿಸುವಂತಿದೆ.
ಇಂದು ಸಂಜೆ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಮತ್ತು ಗುಜರಾತ್ ನಡುವೆ ಪಂದ್ಯ ನಡೆಯಲಿದೆ. ತವರಿನಲ್ಲಿ ಆರ್ ಸಿಬಿ ಆಡುತ್ತಿರುವ ಮೊದಲ ಪಂದ್ಯವಿದು. ಹೀಗಾಗಿ ಈಗಾಗಲೇ ಅಭಿಮಾನಿಗಳು ಟಿಕೆಟ್ ಖರೀದಿಸಿ ಮ್ಯಾಚ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಇಂದಿನ ಪಂದ್ಯಕ್ಕೆ ಸ್ಟೇಡಿಯಂ ಭರ್ತಿಯಾಗಲಿದೆ. ಯಾಕೆಂದರೆ ಈಗಾಗಲೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಆದರೆ ಇದೀಗ ಹವಾಮಾನ ಬದಲಾವಣೆ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ. ನಿನ್ನೆ ಮಧ್ಯಾಹ್ನದ ಬಳಿಕ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು.
ಇಂದಿನ ಹವಾಮಾನ ವರದಿ ಪ್ರಕಾರವೂ ಮೋಡ ಕಂಡುಬರಲಿದೆ. ಹೀಗಾಗಿ ಮಳೆಯಾಗುತ್ತಾ ಎಂಬ ಆತಂಕವಿದೆ. ಆದರೆ ಹವಾಮಾನ ವರದಿ ಪ್ರಕಾರ ಮಳೆಯಾಗುವ ಸಾಧ್ಯತೆ ಕಡಿಮೆ. ಆದರೆ ಮೋಡ ಕವಿದ ವಾತಾವರಣವಿರಲಿದ್ದು, ಮಳೆ ಬಂದರೂ ಪಂದ್ಯಕ್ಕೆ ಅಡ್ಡಿಯಾಗುವಷ್ಟು ಬರಲ್ಲ ಎನ್ನುವುದೇ ಸಮಾಧಾನಕರ ವಿಷಯವಾಗಿದೆ.