Select Your Language

Notifications

webdunia
webdunia
webdunia
webdunia

ಪತ್ನಿ ಎಂದರೆ ಹೀಗಿರಬೇಕು! ರವೀಂದ್ರ ಜಡೇಜಾ ಪತ್ನಿಗೆ ನೆಟ್ಟಿಗರ ಮೆಚ್ಚುಗೆ

ಪತ್ನಿ ಎಂದರೆ ಹೀಗಿರಬೇಕು! ರವೀಂದ್ರ ಜಡೇಜಾ ಪತ್ನಿಗೆ ನೆಟ್ಟಿಗರ ಮೆಚ್ಚುಗೆ
ಅಹಮ್ಮದಾಬಾದ್ , ಗುರುವಾರ, 1 ಜೂನ್ 2023 (08:40 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದ ಬಳಿಕ ರವೀಂದ್ರ ಜಡೇಜಾ ಪತ್ನಿ ರಿವಾಬ ನಡೆದುಕೊಂಡ ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಸಿಕ್ಸರ್, ಬೌಂಡರಿ ಗಳಿಸಿ ಚೆನ್ನೈಗೆ ಐದನೇ ಐಪಿಎಲ್ ಫೈನಲ್ ಗೆಲುವು ಕೊಡಿಸಿದ್ದರು. ಈ ಗೆಲುವಿನ ಬಳಿಕ ಪತಿಯನ್ನು ನೋಡಿ ಭಾವುಕರಾದ ರಿವಾಬ ಮೊದಲು ಜಡೇಜಾ ಕಾಲಿಗೆ ಬಿದ್ದು ನಮಸ್ಕರಿಸಿ ಬಳಿಕ ಅಪ್ಪಿ ಕಣ್ಣೀರು ಹಾಕಿದ್ದರು.

ಮೈ ತುಂಬಾ ಸೀರೆ ಉಟ್ಟುಕೊಂಡು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದ ರಿವಾಬ ಪತಿಯ ಕಾಲಿಗೆ ನಮಸ್ಕರಿಸಿದ ರೀತಿಗೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ಕಾಲದಲ್ಲೂ ಈ ರೀತಿ ಗಂಡನ ಆಶೀರ್ವಾದ ಪಡೆಯುವ ಸಂಪ್ರದಾಯ ಪಾಲಿಸುತ್ತಿದ್ದಾರೆ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಅಭ್ಯಾಸಕ್ಕೆ ಮರಳಿದ ರಿಷಬ್ ಪಂತ್! ವಿಶ್ವಕಪ್ ಗೆ ತಂಡಕ್ಕೆ ವಾಪಸ್?