Webdunia - Bharat's app for daily news and videos

Install App

ದೀಪ್ತಿ ಶರ್ಮಾ ರನೌಟ್ ಗೆ ರವಿಚಂದ್ರನ್ ಅಶ್ವಿನ್ ಸಪೋರ್ಟ್, ಇಂಗ್ಲೆಂಡ್ ಕ್ರಿಕೆಟಿಗರ ಕಿಡಿ

Webdunia
ಭಾನುವಾರ, 25 ಸೆಪ್ಟಂಬರ್ 2022 (10:25 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಮಹಿಳಾ ಕ್ರಿಕೆಟ್ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್ ದೀಪ್ತಿ ಶರ್ಮಾ ಎದುರಾಳಿ ಬ್ಯಾಟಿಗಳನ್ನು ಮಂಕಡ್ ಔಟ್ ಮಾಡಿದ್ದು ಭಾರೀ ಸುದ್ದಿಯಾಗಿದೆ.

ನಿನ್ನೆಯ ಪಂದ್ಯದಲ್ಲಿ ದೀಪ್ತಿ ಶರ್ಮಾ ತಮ್ಮ ಬೌಲಿಂಗ್ ಪೂರ್ತಿಯಾಗುವ ಮೊದಲೇ ಕ್ರೀಸ್ ಬಿಟ್ಟು ಹೊರನಡೆದಿದ್ದ ಎದುರಾಳಿ ತಂಡದ ಚಾರ್ಲೆಟ್ ಡೀನ್ ರನ್ನು ಔಟ್ ಮಾಡಿ ತಮ್ಮ ತಂಡದ ಗೆಲುವಿಗೆ ಕಾರಣವಾಗಿದ್ದರು. ಈ ಮೊದಲು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್ ಪಂದ್ಯದಲ್ಲಿ ಇದೇ ರೀತಿ ಜೋಸ್ ಬಟ್ಲರ್ ರನ್ನು ಔಟ್ ಮಾಡಿ ಸುದ್ದಿಯಾಗಿದ್ದರು.

ನಿಯಮದ ಪ್ರಕಾರ ಇದು ತಪ್ಪಲ್ಲದೇ ಹೋದರೂ ಕ್ರೀಡಾ ಸ್ಪೂರ್ತಿಯ ದೃಷ್ಟಿಯಿಂದ ಈ ರೀತಿ ಔಟ್ ಮಾಡುವುದು ಸರಿಯಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಇದೀಗ ದೀಪ್ತಿ ಆ ರೀತಿ ಔಟ್ ಮಾಡಿದ್ದಕ್ಕೆ ರವಿಚಂದ್ರನ್ ಅಶ್ವಿನ್ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗರಾದ ಸ್ಟುವರ್ಟ್ ಬ್ರಾಡ್, ವೈಯಕ್ತಿಕವಾಗಿ ನಾನೂ ರೀತಿ ಔಟ್ ಮಾಡುವುದನ್ನು ಬಯಸುತ್ತೇನೆ ಎಂದಿದ್ದಾರೆ. ಆದರೆ ಇನ್ನೊಬ್ಬ ವೇಗಿ ಜೇಮ್ಸ್ ಆಂಡರ್ಸನ್ ಯಾಕೆ ಆಟಗಾರರು ಈ ರೀತಿ ಮಾಡಬೇಕೋ ಗೊತ್ತಾಗುತ್ತಿಲ್ಲ. ಆಕೆ ಮೈದಾನವನ್ನೇ ಕದಿಯುತ್ತಿದ್ದಳೇ? ಎಂದು ಟೀಕಿಸಿದ್ದಾರೆ. ಇಂಗ್ಲೆಂಡ್ ಅಭಿಮಾನಿಗಳೂ ಭಾರತೀಯ ಆಟಗಾರರನ್ನು ಮೂದಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿವೃತ್ತಿ ವದಂತಿಗಳಿಗೆ ಒಂದೇ ಕೆಲಸದಿಂದ ಉತ್ತರ ಕೊಟ್ಟ ರೋಹಿತ್ ಶರ್ಮಾ

ಇಂಗ್ಲೆಂಡ್‌ನಲ್ಲಿ ರನ್‌ಹೊಳೆ ಹರಿಸಿದ ಯುವರಾಜ ಶುಭಮಲ್‌ ಗಿಲ್‌ಗೆ ಮತ್ತೊಂದು ಜವಾಬ್ದಾರಿ ನೀಡಲು ಸಿದ್ಧತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಿಸಿಸಿಐ ಷರತ್ತೇನು

ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments