Webdunia - Bharat's app for daily news and videos

Install App

ರಣಜಿ ಟ್ರೋಫಿ ಲೈವ್: ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ಬಂದವರಿಗೆ ನಿರಾಸೆ

Krishnaveni K
ಗುರುವಾರ, 30 ಜನವರಿ 2025 (10:00 IST)
Photo Credit: X
ನವದೆಹಲಿ: ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಇಂದು ದೆಹಲಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ಬಂದ ಅಭಿಮಾನಿಗಳಿಗೆ ಮೊದಲ ದಿನ ನಿರಾಸೆಯಾಗಿದೆ.

ಕಾರಣ ಇಂದು ಟಾಸ್ ಗೆದ್ದ ದೆಹಲಿ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ಸಾಧ್ಯವಾಗದು. ಆದರೂ ಕೊಹ್ಲಿ ಫೀಲ್ಡಿಂಗ್ ಮಾಡುವುದನ್ನು ನೋಡಲು ಸಾಕಷ್ಟು ಜನ ಸೇರಿದ್ದಾರೆ.

ವಿರಾಟ್ ಕೊಹ್ಲಿ ಬರೋಬ್ಬರಿ 13 ವರ್ಷಗಳ ಬಳಿಕ ರಣಜಿ ಟ್ರೋಫಿ ಪಂದ್ಯವಾಡುತ್ತಿದ್ದಾರೆ. ಹೀಗಾಗಿ ಈ ಪಂದ್ಯವನ್ನು ಅಭಿಮಾನಿಗಳೂ ಸಾಕಷ್ಟು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ಪಂದ್ಯವನ್ನು ನೋಡಲು 10 ಸಾವಿರ ಪ್ರೇಕ್ಷಕರು ಸೇರುವ ನಿರೀಕ್ಷೆಯಿದೆ. ರಣಜಿ ಟ್ರೋಫಿ ಪಂದ್ಯವೊಂದಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವುದು ವಿಶೇಷವಾಗಿದೆ.

ಇನ್ನು ಇಂದು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ರೈಲ್ವೇಸ್ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 12 ರನ್ ಗಳಿಸಿದೆ. ಈ ಪಂದ್ಯ ಜಿಯೋ ಸಿನಿಮಾದಲ್ಲಿ ಲೈವ್ ಲಭ್ಯವಿದ್ದು ಸಾಕಷ್ಟು ಜನ ಲೈವ್ ಆಗಿ ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ

IND vs ENG: ಒಂದೇ ಓವರ್ ನಲ್ಲಿ 23 ರನ್, ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಸಿದ್ಧ ಕೃಷ್ಣ

ಪಕ್ಕದಲ್ಲೇ ಇಂಥಾ ಸುಂದರಿ ಇರಲು...ಇದೇ ಕಾರಣಕ್ಕೆ ದ್ವಿತೀಯ ಟೆಸ್ಟ್ ಆಡಲ್ಲ ಅಂದ್ರಂತೆ ಬುಮ್ರಾ

ಪಾಕಿಸ್ತಾನ ಕ್ರಿಕೆಟಿಗರ ಚಾನೆಲ್ ಭಾರತದಲ್ಲಿ ಒಮ್ಮೆ ಆನ್, ಮತ್ತೆ ಆಫ್

ಮುಂದಿನ ಸುದ್ದಿ
Show comments