ರಣಜಿ ಟ್ರೋಫಿ ಕ್ರಿಕೆಟ್: ಮೊದಲ ಗೆಲುವಿನ ಸನಿಹ ಕರ್ನಾಟಕ

Webdunia
ಶುಕ್ರವಾರ, 30 ನವೆಂಬರ್ 2018 (17:20 IST)
ಮೈಸೂರು: ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಈ ಋತುವಿನಲ್ಲಿ ಮೊದಲ ಗೆಲುವು ದಾಖಲಿಸಲು ಕರ್ನಾಟಕ ಕೆಲವೇ ಹೆಜ್ಜೆ ದೂರದಲ್ಲಿದೆ. ಮಹಾರಾಷ್ಟ್ರ ವಿರುದ್ಧ ಗೆಲುವಿಗೆ ಇನ್ನು 130 ರನ್ ಗಳಿಸಿದರೆ ಸಾಕು.


ಮೈಸೂರಿನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಇಂದು ದಿನದಂತ್ಯಕ್ಕೆ ಮಹಾರಾಷ್ಟ್ರ ನೀಡಿದ 184 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ಕರ್ನಾಟಕ ವಿಕೆಟ್ ನಷ್ಟವಿಲ್ಲದೇ 54 ರನ್ ಗಳಿಸಿದೆ. ಕರ್ನಾಟಕ ಪರ ದೇಗಾ ನಿಶ್ಚಲ್ 21 ಮತ್ತು ದೇವದತ್ ಪಡಿಕ್ಕಲ್ 33 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ನಾಳೆ ಒಂದು ದಿನದ ಪಂದ್ಯ ಬಾಕಿಯಿದ್ದು, ಕರ್ನಾಟಕದ ಗೆಲುವು ಬಹುತೇಕ ನಿಶ್ಚಿತವಾಗಿದೆ. ಇದಕ್ಕೂ ಮೊದಲು ಮಹಾರಾಷ್ಟ್ರ ದ್ವಿತೀಯ ಇನಿಂಗ್ಸ್ ನಲ್ಲಿ ಋತುರಾಜ್ ಗಾಯಕ್ ವಾಡ್ ರ 89 ರನ್ ಗಳ ನೆರವಿನಿಂದ 256 ರನ್ ಗಳಿಸಿತ್ತು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 4 ವಿಕೆಟ್ ಮತ್ತು ನಾಯಕ ವಿನಯ್ ಕುಮಾರ್ 3 ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಕೊನೆಯ ಪಂದ್ಯಕ್ಕೆ ಮಿಂಚಿನ ಹೊಡೆತ: ಸರಣಿ ಟೀಂ ಇಂಡಿಯಾ ಕೈವಶ

IND vs AUS: ಟಿ20 ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಭಿಷೇಕ್ ಶರ್ಮಾ

IND vs AUS: ಟಾಸ್ ಗೆದ್ದ ಆಸ್ಟ್ರೇಲಿಯಾ, ಮೊದಲು ಬ್ಯಾಟಿಂಗ್ ಮಾಡ್ತಿರೋದು ಯಾರು

ಒಲಿಂಪಿಕ್ಸ್ ಅವಕಾಶ ಕಳೆದುಕೊಂಡ ಪಾಕಿಸ್ತಾನ: ಯಾವೆಲ್ಲಾ ತಂಡಗಳು ಆಯ್ಕೆ

ಸಾಕಪ್ಪಾ ಸಾಕು.. ಮೀಡಿಯಾ ಕಂಡು ಗೆಳೆಯನ ಜೊತೆ ಎಸ್ಕೇಪ್ ಆದ ಸ್ಮೃತಿ ಮಂಧಾನ

ಮುಂದಿನ ಸುದ್ದಿ
Show comments