ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ಎರಡನೇ ಟೆಸ್ಟ್ ಪಂದ್ಯದ 2ನೇ ದಿನ ರಂಗನಾ ಹೆರಾತ್ ಮಾರಕ ಬೌಲಿಂಗ್ ದಾಳಿ ಮೂಲಕ ಹ್ಯಾಟ್ರಿಕ್ ಗಳಿಸಿದರು. 38 ವರ್ಷ ವಯಸ್ಸಿನ ಸ್ಪಿನ್ನರ್ ಅಡಾಮ್ ವೋಗ್ಸ್, ಪೀಟರ್ ನೆವಿಲ್ಲೆ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ಔಟ್ ಮಾಡಿ ನುವಾನ್ ಜೊಯ್ಸಾ ಬಳಿಕ ಟೆಸ್ಟ್ ಹ್ಯಾಟ್ರಿಕ್ ಗಳಿಸಿದ ಎರಡನೇ ಸ್ಪಿನ್ನರ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಜೋಯಿ ಬರ್ನ್ಸ್ ಅವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಬಳಿಕ ಡೇವಿಡ್ ವಾರ್ನರ್ ಎಚ್ಚರಿಕೆಯ ಆಟವಾಡಿ 42 ರನ್ ಹಾಗೂ ಮಿಚೆಲ್ ಮಾರ್ಶ್ 27 ರನ್, ಉಸ್ಮಾನ್ ಕ್ವಾಜಾ 11 ರನ್ ಸ್ಕೋರ್ ಮಾಡಿದ್ದನ್ನು ಬಿಟ್ಟರೆ ಆಸೀಸ್‌ನ ಯಾವ ಆಟಗಾರನೂ ಎರಡಂಕಿ ದಾಟಲಿಲ್ಲ. ಹೆರಾತ್ ಮತ್ತು ಪೆರೀರಾ ಮಾರಕ್ ಬೌಲಿಂಗ್ ದಾಳಿಗೆ ಆಸೀಸ್ ಪೆವಿಲಿಯನ್ ಪೆರೇಡ್ ಮಾಡಿ 106 ರನ್‌ಗೆ ಆಲೌಟ್ ಆಗಿದೆ.
ಇದರಿಂದಾಗಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 175 ರನ್ ಲೀಡ್ ಗಳಿಸಿದ್ದು, ಎರಡನೇ ಟೆಸ್ಟ್‌ನಲ್ಲೂ ಮೇಲುಗೈ ಸಾಧಿಸಿದೆ. ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 9 ರನ್‌ಗೆ 2 ವಿಕೆಟ್ ಪತನಗೊಂಡಿದೆ. ಸ್ಟಾರ್ಕ್ ಮತ್ತು ಹ್ಯಾಜಲ್ವುಡ್ ತಲಾ 1 ವಿಕೆಟ್ ಗಳಿಸಿದರು.
ಸ್ಕೋರು ವಿವರ
ಶ್ರೀಲಂಕಾ ಮೊದಲ ಇನ್ನಿಂಗ್ಸ್ 281ಕ್ಕೆ 10 ವಿಕೆಟ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 106ಕ್ಕೆ ಆಲೌಟ್
ಡೇವಿಡ್ ವಾರ್ನರ್ 42, ಮಿಚೆಲ್ ಮಾರ್ಶ್ 27
ವಿಕೆಟ್ ಪತನ
0-1 (ಜೋ ಬರ್ನ್ಸ್, 0.2), 54-2 (ಡೇವಿಡ್ ವಾರ್ನರ್, 13.3), 59-3 (ಉಸ್ಮಾನ್ ಖ್ವಾಜಾ, 15.6), 59-4 (ಸ್ಟೀವನ್ ಸ್ಮಿತ್, 16.1), 80-5 (ಆಡಮ್ ವೋಗ್ಸ್, 24.4), 80-6 (ಪೀಟರ್ ನೆವಿಲ್, 24.5), 80-7 (ಮಿಚೆಲ್ ಸ್ಟಾರ್ಕ್, 24.6), 85-8 (ನಥಾನ್ ಲಿನ್, 27.2), 89-9 (ಜೋಶ್ ಹ್ಯಾಜಲ್‌ವುಡ್, 31.2), 106-10 (ಮಿಚೆಲ್ ಮಾರ್ಷ್, 33.2)
ಬೌಲಿಂಗ್ ವಿವರ
ವಿಶ್ವಾ ಫರ್ನಾಂಡೊ 1 ವಿಕೆಟ್, ರಂಗನಾ ಹೆರಾತ್ 4 ವಿಕೆಟ್, ದಿಲ್ರುವಾನ್ ಪೆರೇರಾ 4 ವಿಕೆಟ್, ಲಕ್ಷಣ್ ಸಂದಾಕನ್ 1 ವಿಕೆಟ್
ಶ್ರೀಲಂಕಾ ಎರಡನೇ ಇನ್ನಿಂಗ್ಸ್ 28ಕ್ಕೆ 2 ವಿಕೆಟ್
ಕುಲಾಸ್ ಪೇರಿರಾ 14 ನಾಟೌಟ್, ಕುಸಾಲ್ ಮೆಂಡಿಸ್ 6 ನಾಟೌಟ್
ವಿಕೆಟ್ ಪತನ
5-1(ಕೌಶಲ್ ಸಿಲ್ವಾ 1.6), 9-2(ದಿಮುತ್ ಕರುಣಾರತ್ನೆ,2.2)
ಬೌಲಿಂಗ್ ವಿವರ
ಮಿಚೆಲ್ ಸ್ಟಾರ್ಕ್ 1 ವಿಕೆಟ್, ಹ್ಯಾಜಲ್‌ವುಡ್ 1 ವಿಕೆಟ್