Publish Date: Tue, 19 Dec 2017 (20:14 IST)
Updated Date: Tue, 19 Dec 2017 (20:15 IST)
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಬಂಗಾಳ ವಿರುದ್ಧದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ದೆಹಲಿ ಇನ್ನಿಂಗ್ಸ್ ಗೆಲುವು ಸಾಧಿಸುವ ಮೂಲಕ ರಣಜಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದು ಬ್ಯಾಂಟಿಂಗ್ ಆಯ್ದುಕೊಂಡಿದ್ದ ಬಂಗಾಳ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಸುದೀಪ್ ಚಟರ್ಜಿ (83) ಅವರ ಅರ್ಧಶತಕದ ಸಹಾಯದಿಂದ 286 ರನ್ ಪೇರಿಸಿ ಹತ್ತು ವಿಕೆಟ್ ಕಳೆದುಕೊಂಡಿತ್ತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ದೆಹಲಿ ತಂಡದ ಗೌತಮ್ ಗಂಭೀರ್ (127) ಮತ್ತು ಕುನಾಲ್ ಚಂದೇಲಾ (113) ಅವರು ಮೊದಲ ವಿಕೆಟ್‌ಗೆ 232 ರನ್‌ಗಳ ಜೊತೆಯಾಟವನ್ನು ನೀಡಿದರು, ಈ ಜೊತೆಯಾಟದ ನೆರವಿನಿಂದ ದೆಹಲಿ ಮೊದಲ ಇನ್ನಿಂಗ್ಸ್‌ನಲ್ಲಿ 398 ರನ್ ಪೇರಿಸಿ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 112 ರನ್‌ಗಳ ಮುನ್ನಡೆ ಸಾಧಿಸಿತು ದೆಹಲಿ ತಂಡ.
112 ರನ್‌ಗಳ ಹಿನ್ನಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಂಗಾಳ ತಂಡವು ಹೆಚ್ಚು ಹೊತ್ತು ಬ್ಯಾಂಟಿಂಗ್ ಮಾಡದೇ ಕೇವಲ 86 ರನ್‌ಗಳಿಗೆ ಆಲೌಟ್ ಆಗಿ ಪವಿಲಿಯನ್‌ಗೆ ಮರಳಿತು. 26 ರನ್ ಹಾಗೂ ಇನ್ನಿಂಗ್ಸ್ ಗೆಲುವು ಸಾಧಿಸಿದ ದೆಹಲಿ ತಂಡ ಫೈನಲ್‌ಗೆ ತಲುಪಿತು.
ಸಂಕ್ಷಿಪ್ತ ಸ್ಕೋರ್:
ಬಂಗಾಳ - ಮೊದಲ ಇನ್ನಿಂಗ್ಸ್ - 286/10 (94.2)
ದೆಹಲಿ - ಮೊದಲ ಇನ್ನಿಂಗ್ಸ್ - 398/10 (117)
ಬಂಗಾಳ - ಎರಡನೇ ಇನ್ನಿಂಗ್ಸ್ - 86/10 (44.4)
ಫಲಿತಾಂಶ: ದೆಹಲಿಗೆ ಇನ್ನಿಂಗ್ಸ್ ಹಾಗೂ 26 ರನ್‌ಗಳ ಜಯ, ಫೈನಲ್ಸ್‌ಗೆ ಎಂಟ್ರಿ.