ಕೋಲ್ಕತಾದಲ್ಲಿ ಇನ್ನೆರಡು ದಿನಗಳಲ್ಲಿ ಮುಂಗಾರು ಮಳೆ ಅಪ್ಪಳಿಸುವ ನಿರೀಕ್ಷೆಯಿದ್ದು, ಎಡೆನ್ ಗಾರ್ಡನ್ಸ್ ಆತಿಥ್ಯ ವಹಿಸುವ ದೇಶದ ಪ್ರಥಮ ನಸುಗೆಂಪು ಚೆಂಡಿನ ಹಗಲು-ರಾತ್ರಿ ನಾಲ್ಕು ದಿನಗಳ ಜೂನ್ 18-21ರವರೆಗಿನ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗುವ ಸಾಧ್ಯತೆಯಿದೆ.
ಉತ್ತರಬಂಗಾಳ ಮತ್ತು ಗ್ಯಾಂಕ್ಟಕ್‌ನಲ್ಲಿ ಮುಂಗಾರು ಅಡಿಯಿಟ್ಟಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ನಗರದಲ್ಲಿ ಮುಂಗಾರು ಬೀಳುವುದೆಂದು ನಿರೀಕ್ಷಿಸಲಾಗಿದೆ ಎಂದು ಜಿಸಿ ದೇಬನಾಥ್ ಹವಾಮಾನ ಬುಲೆಟಿನ್‌ನಲ್ಲಿ ಗುರುವಾರ ತಿಳಿಸಿದರು.
ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಉದ್ದೇಶಿತ ಪ್ರಥಮ ಹಗಲು ರಾತ್ರಿ ಟೆಸ್ಟ್‌ಗೆ ಭಾರತ ಆತಿಥ್ಯ ವಹಿಸಲಿದ್ದು, ಅದಕ್ಕೆ ಮುನ್ನ ಎಡೆನ್ ಗಾರ್ಡನ್ಸ್ ನಸುಗೆಂಪು ಕೂಕಾಬುರಾ ಚೆಂಡಿನಲ್ಲಿ ನಾಲ್ಕು ದಿನಗಳ ಸೂಪರ್ ಲೀಗ್ ಫೈನಲ್ ಪಂದ್ಯವನ್ನು ಫ್ಲಡ್ ಲೈಟ್‌ನಲ್ಲಿ ಆಯೋಜಿಸಿದೆ. ಬಿಸಿಸಿಐ ಅಧಿಕೃತ ಪ್ರಸಾರ ಸಂಸ್ಥೆ ಸ್ಟಾರ್ ಸ್ಫೋರ್ಟ್‌ನಲ್ಲಿ ಜೂನ್ 18-21ರ ಪಂದ್ಯ ನೇರಪ್ರಸಾರವಾಗಲಿದ್ದು, ಸೌರವ್ ಗಂಗೂಲಿ ನೇತೃತ್ವದ ಬಂಗಾಳ ಕ್ರಿಕೆಟ್ ಸಂಸ್ಥೆ ಈ ಪಂದ್ಯ ನಡೆಸಲು ಕಟಿಬದ್ಧವಾಗಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ