ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮುಂದಿನ 6 ತಿಂಗಳಲ್ಲಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ನಾರ್ತಾಲರ್‌ಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಎಚ್ಚರಿಸಿದೆ.
ಅತೀ ವೇಗದ ವಾಹನ ಚಾಲನೆಗಾಗಿ ಈಗಾಗಲೇ ನಾಲ್ಕು ಬಾರಿ ಸ್ಟೋಕ್ಸ್ ಸಿಕ್ಕಿಬಿದ್ದಿದ್ದು, ಗಂಟೆಗೆ 50 ಕಿಮೀ ವಲಯದಲ್ಲಿ 75 ಕಿಮೀ ವೇಗದಲ್ಲಿ ವಾಹನ ಚಾಲನೆ ಮಾಡಿದ್ದನ್ನು ಒಪ್ಪಿಕೊಂಡ ಸ್ಟೋಕ್ಸ್ ಅವರಿಗೆ ಡಿಸೆಂಬರ್ ಮಧ್ಯಾವಧಿವರೆಗೆ ನಿಷೇಧ ವಿಧಿಸಲಾಗಿದೆ.
ಸ್ಟೋಕ್ಸ್ ಮಂಗಳವಾರ ಕೋರ್ಟ್‌ನಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಸ್ಟೋಕ್ಸ್ ಪ್ರಸಕ್ತ ಮೊದಲ ಟೆಸ್ಟ್‌ನಲ್ಲಿ ಅನುಭವಿಸಿದ ಮಂಡಿ ನೋವಿನಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. 2016ರ ವಿಶ್ವ ಟಿ 20 ಫೈನಲ್‌ನಲ್ಲಿ 25 ವರ್ಷದ ಸ್ಟೋಕ್ಸ್ ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ಆಟಗಾರ ಬ್ರಾತ್‌ವೈಟ್ ಸತತ ನಾಲ್ಕು ಸಿಕ್ಸರುಗಳನ್ನು ಬಾರಿಸಿದ್ದರು. ಆಗಸ್ಟ್ 26ರಂದು ಆಶಸ್ ಅಂತಿಮ ಟೆಸ್ಟ್ ಪಂದ್ಯದಲ್ಲಿ 3ವಿಕೆಟ್ ಕಬಳಿಸಿದ ಎರಡು ದಿನಗಳ ಬಳಿಕ, ಸ್ಟೋಕ್ಸ್ ಎ1 ನಾರ್ತ್‌ಬೌಂಡ್ ರಸ್ತೆಯಲ್ಲಿ ಗಂಟೆಗೆ 61 ಕಿಮೀ ವಾಹನ ಚಾಲನೆ ಮಾಡಿದ್ದನ್ನು ಒಪ್ಪಿಕೊಂಡಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.