Publish Date: Mon, 13 Nov 2023 (11:00 IST)
Updated Date: Mon, 13 Nov 2023 (11:04 IST)
ಬೆಂಗಳೂರು: ನೆದರ್ಲ್ಯಾಂಡ್ಸ್ ವಿರುದ್ಧ ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ಏಕದಿನ ವಿಶ್ವಕಪ್ ನ ಕೊನೆಯ ಲೀಗ್ ಪಂದ್ಯವಾಡಿದ ಬಳಿಕ ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಭಾಷಾ ಪ್ರೇಮ ಮೆರೆದಿದ್ದಾರೆ.
ಪಂದ್ಯದ ಬಳಿಕ ಕೋಚ್ ರಾಹುಲ್ ದ್ರಾವಿಡ್ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಗಾಗಿ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಕನ್ನಡದಲ್ಲೇ ಮಾತನಾಡಿದ್ದಾರೆ. ಅವರ ಕನ್ನಡ ಮಾತುಗಳು ಸಂದರ್ಶಕರು ಮತ್ತು ವೀಕ್ಷಕರಿಗೂ ಇಷ್ಟವಾಗಿದೆ. ದ್ರಾವಿಡ್ ಬೆಂಗಳೂರಿಗರಾಗಿದ್ದರೂ ಕನ್ನಡದಲ್ಲಿ ಮಾತನಾಡಿದ್ದೇ ಕಡಿಮೆ. ಹೀಗಾಗಿ ಅವರಿಗೆ ಭಾಷೆಯೇ ಬರಲ್ಲವೇನೋ ಅಂದುಕೊಂಡಿದ್ದರು. ಆದರೆ ನಿನ್ನೆಯ ಅವರ ಸಂದರ್ಶನ ನೋಡಿದರೆ ಶೇ.95 ರಷ್ಟು ಕನ್ನಡದಲ್ಲೇ ಮಾತನಾಡಿ ತಮಗೆ ಕನ್ನಡ ಚೆನ್ನಾಗಿ ಗೊತ್ತು ಎಂದು ತೋರಿಸಿಕೊಟ್ಟಿದ್ದಾರೆ.
ಇನ್ನು, ಪಂದ್ಯದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಗೆಲುವಿನ ಸಂಭ್ರಮ ಹಂಚಿಕೊಂಡ ಕೆಎಲ್ ರಾಹುಲ್, ಕನ್ನಡದಲ್ಲೇ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಬರೆಯುವ ಮೂಲಕ ತಾನು ಕನ್ನಡಿಗ ಎಂದು ಸಾಬೀತುಪಡಿಸಿದ್ದಾರೆ. ರಾಹುಲ್ ನಿನ್ನೆಯ ಪಂದ್ಯದಲ್ಲಿ ತವರಿನ ಅಂಗಳದಲ್ಲಿ ಭರ್ಜರಿ ಶತಕ ಭಾರಿಸಿ ರಂಜಿಸಿದ್ದರು.