Publish Date: Tue, 21 Jun 2022 (09:10 IST)
Updated Date: Tue, 21 Jun 2022 (09:39 IST)
ಮುಂಬೈ: ಕಳೆದ 8 ತಿಂಗಳಲ್ಲಿ ಟೀಂ ಇಂಡಿಯಾ ಒಟ್ಟು ಆರು ನಾಯಕರನ್ನು ಕಂಡಿದೆ. ಈ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ 8 ತಿಂಗಳಲ್ಲಿ ನಾವು 6 ನಾಯಕರನ್ನು ಕಂಡಿದ್ದೇವೆ. ಆದರೆ ಇದು ನಾನು ಕೋಚ್ ಆಗಿ ತಂಡಕ್ಕೆ ಸೇರ್ಪಡೆಯಾದಾಗ ನನ್ನ ಯೋಜನೆಯ ಭಾಗವಾಗಿರಲಿಲ್ಲ ಎಂದಿದ್ದಾರೆ.
ಹಾಗಿದ್ದರೂ ಕೊರೋನಾ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಪಂದ್ಯಗಳು ನಡೆಯುತ್ತಿರುವುದರಿಂದ ಇದು ಅನಿವಾರ್ಯ. ಇದರಿಂದಾಗಿ ನಾವೀಗ ಹಲವು ನಾಯಕರಿಗೆ ಅವಕಾಶ ಕೊಟ್ಟು ಬೆಳೆಸಿದ ಹಾಗಾಯ್ತು ಎಂದಿದ್ದಾರೆ ದ್ರಾವಿಡ್.