ರವೀಂದ್ರ ಜಡೇಜಾಗೆ ಆಡುವ ಬಳಗದಲ್ಲಿ ಅವಕಾಶ ಕೊಟ್ಟರೆ ರವಿಚಂದ್ರನ್ ಅಶ್ವಿನ್ ಗೆ ಹೊಟ್ಟೆಕಿಚ್ಚಾಗುತ್ತಾ

Krishnaveni K
ಮಂಗಳವಾರ, 3 ಸೆಪ್ಟಂಬರ್ 2024 (09:30 IST)
ಚೆನ್ನೈ: ಟೀಂ ಇಂಡಿಯಾ ಕಂಡ ಶ್ರೇಷ್ಠ ಸ್ಪಿನ್ ಜೋಡಿಯಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕೂಡಾ ಒಬ್ಬರು. ಆದರೆ ವಿದೇಶಕ್ಕೆ ಹೋದಾಗ ತನ್ನನ್ನು ಬಿಟ್ಟು ರವೀಂದ್ರ ಜಡೇಜಾಗೆ ಅವಕಾಶ ಕೊಟ್ಟಾಗ ಅವರಿಗೆ ಹೊಟ್ಟೆಯುರಿಯುತ್ತಾ ಎಂಬ ಪ್ರಶ್ನೆಗೆ ಸ್ವತಃ ಅಶ್ವಿನ್ ಉತ್ತರಿಸಿದ್ದಾರೆ.

ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಜೋಡಿ ಟೆಸ್ಟ್ ಕ್ರಿಕೆಟ್ ನಲ್ಲಿ ಅನೇಕ ದಾಖಲೆಗಳನ್ನು ಮಾಡಿದೆ. ಈ ಇಬ್ಬರೂ ಭಾರತೀಯ ನೆಲದಲ್ಲಿ ಟೆಸ್ಟ್ ಪಂದ್ಯವಾಡುತ್ತಿದ್ದರೆ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿರುತ್ತಾರೆ. ಆದರೆ ವಿದೇಶಕ್ಕೆ ಹೋದಾಗ ಅನಿವಾರ್ಯವಾಗಿ ಇಬ್ಬರಲ್ಲಿ ಒಬ್ಬರು ಆಡುವ ಬಳಗದಿಂದ ಹೊರಗಿರಬೇಕಾಗುತ್ತದೆ.

ಬಹುತೇಕ ಸಂದರ್ಭದಲ್ಲಿ ಅಶ್ವಿನ್ ರನ್ನೇ ಹೊರಗಿಡಲಾಗುತ್ತದೆ. ಅಶ್ವಿನ್ ಗೆ ಹೋಲಿಸಿದರೆ ಜಡೇಜಾ ಉತ್ತಮ ಬ್ಯಾಟಿಗ ಎನ್ನುವ ಕಾರಣಕ್ಕೆ ಅವರನ್ನೇ ಆಯ್ಕೆ ಮಾಡಲಾಗುತ್ತದೆ. ಯಾವುದೇ ಆಟಗಾರನಿಗಾದರೂ ತನ್ನನ್ನು ಬಿಟ್ಟು ಮತ್ತೊಬ್ಬನನ್ನು ಆಯ್ಕೆ ಮಾಡಿದಾಗ ಸಣ್ಣದಾಗಿ ಒಂದು ಹೊಟ್ಟೆಕಿಚ್ಚು ಆಗುವುದು ಸಹಜ.

ಅದೇ ರೀತಿ ಅಶ್ವಿನ್ ಗೂ ಆಗುತ್ತಾ ಎಂದು ಪತ್ರಕರ್ತ ವಿಮಲ್ ಕುಮಾರ್ ಅವರೊಂದಿಗಿನ ಸಂದರ್ಶನವೊಂದರಲ್ಲಿ ರವಿಚಂದ್ರನ್ ಅಶ್ವಿನ್ ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅಶ್ವಿನ್ ‘ನಾನು ಆ ರೀತಿ ಹೊಟ್ಟೆ ಕಿಚ್ಚು ಪಡುವ ಮನುಷ್ಯ ಅಲ್ಲ. ನಾನು ಆಡದೇ ಇರುವುದಕ್ಕೆ ಜಡೇಜಾ ಕಾರಣವಾಗಿರುವುದಿಲ್ಲ. ನಾನು ಆತನಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿರುತ್ತೇನೆ. ತಂಡಕ್ಕೆ ನಾನು ಹೇಗೆ ಕೊಡುಗೆ ನೀಡಬಹುದು ಎಂದಷ್ಟೇ ಯೋಚಿಸುತ್ತಿರುತ್ತೇನೆ. ಹೊಟ್ಟೆಕಿಚ್ಚಿನ ಸ್ವಭಾವವನ್ನು ನಾವು ಮೆಟ್ಟಿ ನಿಲ್ಲಬೇಕಾಗುತ್ತದೆ’ ಎಂದು ಅಶ್ವಿನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ನಿನ್ ತಲೆ ಓಡಿಸ್ಬೇಡ, ಹೇಳಿದ್ದು ಹಾಕು: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್ Video

ಪ್ರಸಿದ್ಧ ಕೃಷ್ಣ ರನ್ ಮೆಷಿನ್: ಈತನನ್ನು ಹೇಗೆ ಪ್ರಮುಖ ಬೌಲರ್ ಅಂತ ಟೀಂನಲ್ಲಿ ಇಟ್ಕೊಂಡಿದ್ದಾರೆ

ಮುಂದಿನ ಸುದ್ದಿ
Show comments