ಸ್ಪಿನ್ನರ್ ಅಕ್ಸರ್ ಪಟೇಲ್ ಬೌಲಿಂಗ್, ಧೋನಿಗೆ ಕೊನೆಯ ಓವರಿನಲ್ಲಿ ಗೆಲ್ಲುವುದಕ್ಕೆ 23 ರನ್ ಅಗತ್ಯವಿತ್ತು. ಮೊದಲ ಎಸೆತವನ್ನು ಡೀಪ್ ಮಿಡ್‌ವಿಕೆಟ್‌ಗೆ ಧೋನಿ ಬಾರಿಸಿದರು. ಎರಡನೇ ಎಸೆತದಲ್ಲಿ ಸ್ಪಿನ್ನರ್ ಲೆಗ್ ಸೈಡ್ ವೈಡ್ ಬಾಲ್ ಎಸೆದರು. ಮುಂದಿನ ಎಸೆತವನ್ನು ಧೋನಿ ಮಿಡ್‌ವಿಕೆಟ್‌ನಲ್ಲಿ ಸಿಕ್ಸರ್ ಎತ್ತಿದರು. ಮೂರನೇ ಎಸೆತವನ್ನು ಪುಣೆ ನಾಯಕ ಆಫ್‌ಸೈಡ್‌ಗೆ ಬಾರಿಸಿದರು.
ಲಾಂಗ್ ಆಫ್‌ನಲ್ಲಿ ಆಮ್ಲಾ ಬೌಂಡರಿ ಉಳಿಸಿದ್ದರಿಂದ ಧೋನಿ ಒಂದು ರನ್ನನ್ನೂ ಓಡಲಿಲ್ಲ. ಅಕ್ಸರ್ ಲೆಂಗ್ತ್ ಬಾಲ್ ಹಾ
ಕಿದಾಗ ಧೋನಿ ಸ್ಕ್ವೇರ್‌ನಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲುವುದಕ್ಕೆ ಸಿಕ್ಸರ್ ಅಗತ್ಯವಿತ್ತು. ಕೊನೆಯ ಎಸೆತವನ್ನು ಮಿಡ್‌ವಿಕೆಟ್‌ನಲ್ಲಿ ಸಿಕ್ಸರ್ ಎತ್ತಿ ತಂಡಕ್ಕೆ ವಿಜಯವನ್ನು ತಂದಿತ್ತರು.
ಧೋನಿ ಈ ಮೂಲಕ ಅಸಾಧ್ಯವಾದ ಕೆಲಸವನ್ನ ಸಾಧ್ಯವಾಗಿಸಿದರು. ಕೊನೆಯ ಓವರಿನಲ್ಲಿ ಧೋನಿ 23 ರನ್ ಸಿಡಿಸಿದ್ದು, ತನ್ನ ತಂಡ ಕೊನೆಯ ಸ್ಥಾನಕ್ಕೆ ಕುಸಿಯುವುದರಿಂದ ತಪ್ಪಿಸಿದರು.
ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಮುರಳಿ ವಿಜಯ್ ಅವರ 59 ರನ್ ಮತ್ತು ಗುರುಕೀರತ್ ಸಿಂಗ್ ಮಾನ್ ಅವರ 51 ರನ್ ನೆರವಿನಿಂದ 7 ವಿಕೆಟ್ ಕಳೆದುಕೊಂಡು 172 ರನ್ ಸ್ಕೋರ್ ಮಾಡಿತ್ತು. ಅಶ್ವಿನ್ ಕೊನೆಯ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿ 4 ವಿಕೆಟ್ ಕಬಳಿಸಿದ್ದರು. ಒಂದು ಹಂತದಲ್ಲಿ ರೈಸಿಂಗ್ ಪುಣೆ ಸೋಲುತ್ತೆಂದು ಎಲ್ಲರ ಅನಿಸಿಕೆಯಾಗಿತ್ತು. ಆದರೆ ರೈಸಿಂಗ್ ಪುಣೆಗೆ ಧೋನಿ ಆಪದ್ಬಾಂಧವರಾಗಿ ಕೊನೆಯ ಓವರಿನಲ್ಲಿ ಗೆಲ್ಲಿಸಿಕೊಟ್ಟು ತಂಡದ ಮಾನ ಉಳಿಸಿದರು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.