ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವೆ ಕೆಲವು ತಿಂಗಳ ಹಿಂದೆ ಸಂಬಂಧ ಕಡಿದುಹೋದ ವದಂತಿ ಕೇಳಿಬಂದಿತ್ತು. ಆದರೆ ಇತ್ತೀಚೆಗೆ ಬೆಂಗಳೂರಿನ ರೆಸ್ಟೊರೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಪುನಃ ಅವರ ಪ್ರೇಮ ಗರಿಗೆದರಿದೆ.
ವಿರಾಟ್ ಮತ್ತು ಅನುಷ್ಕಾ ನಡುವೆ ಲವ್ ಬ್ರೇಕ್ ಆಗಿದೆ, ಅವರ ನಡುವೆ ವಿರಸ ಉಂಟಾಗಿದೆ ಹೀಗೆ ನಾನಾ ಊಹಾಪೋಹದ ವದಂತಿಗಳು ಹರಡಿತ್ತು. ಆದರೆ ಈ ಗಾಳಿಸುದ್ದಿಗಳನ್ನು ಈ ಜೋಡಿ ದೃಢಪಡಿಸಲೂ ಇಲ್ಲ, ನಿರಾಕರಿಸಲೂ ಇಲ್ಲ.
ಆದರೆ ಇತ್ತೀಚೆಗೆ ವಿರಾಟ್ ತಂಡವಾದ ರಾಯಲ್ ಚಾಲೆಂಜರ್ಸ್ ಗೆಲುವಿನ ಬಳಿಕ ಅವರಿಬ್ಬರು ರೆಸ್ಟೊರೆಂಟ್‌ನಲ್ಲಿ ಜತೆಯಲ್ಲಿರುವ ಚಿತ್ರದಿಂದ ಎಲ್ಲಾ ಗಾಳಿಸುದ್ದಿಗಳಿಗೆ ತೆರೆಬಿದ್ದಿದೆ. ಬೆಂಗಳೂರಿನ ಜಪಾನೀಸ್ ರೆಸ್ಟೊರೆಂಡ್ ಇಡಿಒನ ಬಾಣಸಿಗರ ಜತೆ ಅನುಷ್ಕಾ , ವಿರಾಟ್ ಚಿತ್ರಗಳು ಕಳೆದ ಗುರುವಾರದಿಂದ ಹರಿದಾಡುತ್ತಿವೆ.
ತಮ್ಮ ಆರ್‌ಸಿಬಿ ಟೀಂಮೇಟ್ಸ್ ಜತೆ ಅನುಷ್ಕಾ ಮತ್ತು ವಿರಾಟ್ ವಿಜಯೋತ್ಸವದ ಆಚರಣೆಗಾಗಿ ಜಪಾನಿ ಹೊಟೆಲ್‌ಗೆ ತೆರಳಿದ್ದರು.
ವರದಿಗಳ ಪ್ರಕಾರ ಇವರಿಬ್ಬರ ಲವ್ ಬ್ರೇಕ್ ಅಪ್ ಆಗಿರಲೇ ಇಲ್ಲ. ಕೆಲವು ಕಾಲ ಪರಸ್ಪರ ದೂರವಾಗಿರಲು ನಿರ್ಧರಿಸಿದ್ದರು. ಅನುಷ್ಕಾ ಮುಂದಿನ ಸುಲ್ತಾನ್ ಚಿತ್ರಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿಕೆಯಾದ್ದರಿಂದ ಅವರಿಬ್ಬರು ಕೆಲಕಾಲ ದೂರ ಉಳಿದಿದ್ದು ವಾಸ್ತವವಾಗಿ ಒಳ್ಳೆಯದು ಮಾಡಿದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.