Publish Date: Thu, 10 Aug 2023 (09:00 IST)
Updated Date: Thu, 10 Aug 2023 (09:11 IST)
ಲಂಡನ್: ಕೌಂಟಿ ಕ್ರಿಕೆಟ್ ಆಡುತ್ತಿರುವ ಭಾರತ ಕ್ರಿಕೆಟಿಗ ಪೃಥ್ವಿ ಶಾ ಅಬ್ಬರದ ಇನಿಂಗ್ಸ್ ಆಡಿದ್ದು ದಾಖಲೆಯ ದ್ವಿಶತಕ ಸಿಡಿಸಿದ್ದಾರೆ.
ರಾಯಲ್ ಲಂಡನ್ ಏಕದಿನ ಕಪ್ 2023 ರಲ್ಲಿ ನಾರ್ಥಾಂಪ್ಟನ್ ಶೈರ್ ಪರ ಆಡುತ್ತಿರುವ ಪೃಥ್ವಿ ಶಾ ಸೋಮರ್ ಸೆಟ್ ವಿರುದ್ಧದ ಪಂದ್ಯದಲ್ಲಿ 153 ಎಸೆತಗಳಲ್ಲಿ 24 ಬೌಂಡರಿ 11 ಸಿಕ್ಸರ್ ಸಹಿತ 244 ರನ್ ಚಚ್ಚಿದ್ದಾರೆ.
ಈ ಈ ಟೂರ್ನಿಯ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೂರನೇ ಆಟಗಾರ ಎಂಬ ಕೀರ್ತಿಗೆ ಪೃಥ‍್ವಿ ಭಾಜನರಾದರು. ಅಲ್ಲದೆ ಇಂಗ್ಲೆಂಡ್ ಲಿಸ್ಟ್ ಎ ಕ್ರಿಕೆಟ್ ನಲ್ಲಿ ಅತೀ ವೇಗದ ದ್ವಿಶತಕ ಎಂಬ ದಾಖಲೆಯಾಯಿತು. 23 ವರ್ಷದ ಪೃಥ್ವಿ ಶಾಗೆ ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ. ಆದರೆ ಇದೀಗ ಕೌಂಟಿ ಕ್ರಿಕೆಟ್ ನಲ್ಲಿ ತಮ್ಮ ಹಳೆಯ ಫಾರ್ಮ್ ಪ್ರದರ್ಶಿಸಿ ಟೀಂ ಇಂಡಿಯಾ ಆಯ್ಕೆಗಾರರಿಗೆ ಸಂದೇಶ ರವಾನಿಸಿದ್ದಾರೆ.