Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ 2024 ರಲ್ಲಿ ನಿವೃತ್ತರಾದ ದಿಗ್ಗಜ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ

Rahul Dravid-Kohli-Rohit Sharma

Krishnaveni K

ಬಾರ್ಬಡೋಸ್ , ಸೋಮವಾರ, 1 ಜುಲೈ 2024 (09:08 IST)
Photo Credit: X
ಬಾರ್ಬಡೋಸ್: ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಅನೇಕ ತಾರೆಯರು ಕಿರು ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಭಾರತ ತಂಡದಲ್ಲೇ ಮೂವರು ತಾರೆಯರು ಒಟ್ಟಿಗೇ ವಿದಾಯ ಘೋಷಿಸಿದ್ದಾರೆ. ಇದೀಗ ಯಾವೆಲ್ಲಾ ತಂಡದಲ್ಲಿ ಯಾರೆಲ್ಲಾ ಆಟಗಾರರು ವಿದಾಯ ಹೇಳಿದರು ಎಂಬ ವಿವರ ಇಲ್ಲಿದೆ ನೋಡಿ.

ಟೀಂ ಇಂಡಿಯಾ: ಈ ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ತಂಡ ಅಭಿಮಾನಿಗಳಿಗೆ ಖುಷಿಯ ಜೊತೆಗೇ ಬೇಸರವನ್ನೂ ನೀಡಿದೆ. ಟೀಂ ಇಂಡಿಯಾ ಕಂಡ ಈಗಿನ ಜನರೇಷನ್ ನ ದಿಗ್ಗಜ ಕ್ರಿಕೆಟಿಗರೆಂದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ. ಮೊನ್ನೆ ವಿಶ್ವಕಪ್ ಫೈನಲ್ ಗೆಲ್ಲುತ್ತಿದ್ದಂತೇ ಇಬ್ಬರೂ ಟಿ20 ಮಾದರಿಗೆ ನಿವೃತ್ತಿ ಘೋಷಣೆ ಮಾಡಿ ಅಭಿಮಾನಿಗಳಿಗೆ ಬೇಸರವುಂಟು ಮಾಡಿತ್ತು. ಒಂದು ಯುಗಾಂತ್ಯವಾಯಿತು ಎಂದು ಅಭಿಮಾನಿಗಳು ಬೇಸರಿಸಿದ್ದರು. ಇವರಿಬ್ಬರ ಜೊತೆಗೆ ರವೀಂದ್ರ ಜಡೇಜಾ ಕೂಡಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿನ್ನೆ ನಿವೃತ್ತಿ ಘೋಷಿಸಿದರು. ಇನ್ನು, ಕೋಚ್ ಆಗಿ ರಾಹುಲ್ ದ್ರಾವಿಡ್ ಕೂಡಾ ನಿವೃತ್ತರಾದರು.

ಆಸ್ಟ್ರೇಲಿಯಾ ತಂಡ: ಆಸ್ಟ್ರೇಲಿಯಾ ತಂಡದ ಹೊಡೆಬಡಿಯ ಆರಂಭಿಕ ಡೇವಿಡ್ ವಾರ್ನರ್ ಗೆ ಭಾರತದ ವಿರುದ್ಧದ ಸೂಪರ್ 8 ಪಂದ್ಯ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಆ ಪಂದ್ಯದ ಬಳಿಕ ಅವರು ನಿವೃತ್ತಿ ಘೋಷಿಸಿದರು.

ನ್ಯೂಜಿಲೆಂಡ್: ನ್ಯೂಜಿಲೆಂಡ್ ನ ಪ್ರಮಖ ವೇಗಿ ಟ್ರೆಂಟ್ ಬೌಲ್ಟ್ ಕೂಡಾ ಈ ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು. ಪಪುವಾ ನ್ಯೂಗಿನಿ ತಂಡದ ವಿರುದ್ಧ ಅವರು ಕೊನೆಯ ಪಂದ್ಯವಾಡಿದ್ದರು.

ಈ ಮೂಲಕ ಈ ವಿಶ್ವಕಪ್ ಒಂದು ರೀತಿಯಲ್ಲಿ ಹಿರಿಯ ಕ್ರಿಕೆಟಿಗರ ನಿವೃತ್ತಿಯ ಟೂರ್ನಿಯಾಗಿ ಪರಿವರ್ತನೆಯಾಯಿತು. ಅದರಲ್ಲೂ ನಿವೃತ್ತರಾದ ಕ್ರಿಕೆಟಿಗರಲ್ಲಿ ಭಾರತೀಯ ಕ್ರಿಕೆಟಿಗರದ್ದೇ ಸಿಂಹಪಾಲು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಟ್ರೋಫಿ ಜೊತೆಗೇ ಮಲಗಿ ನಿದ್ರಿಸಿದ ರೋಹಿತ್ ಶರ್ಮಾ