Select Your Language

Notifications

webdunia
webdunia
webdunia
webdunia

Virat Kohli: ವಿರಾಟ್ ಕೊಹ್ಲಿ ಸ್ಥಾನಕ್ಕೆ ಕ್ಯೂನಲ್ಲಿ ನಿಂತಿರುವ ಟೀಂ ಇಂಡಿಯಾ ಕ್ರಿಕೆಟಿಗರು

Virat Kohli

Krishnaveni K

ಮುಂಬೈ , ಮಂಗಳವಾರ, 13 ಮೇ 2025 (09:12 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ಮಾದರಿಯಿಂದ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರು ಆಡುತ್ತಿದ್ದ ನಾಲ್ಕನೇ ಕ್ರಮಾಂಕ ತುಂಬಲು ಟೀಂ ಇಂಡಿಯಾದಲ್ಲಿ ಆಟಗಾರರ ದಂಡೇ ಕ್ಯೂ ನಿಂತಿದೆ.

ವಿರಾಟ್ ಕೊಹ್ಲಿ ಟೀಂ ಇಂಡಿಯಾದ ರನ್ ಮೆಷಿನ್ ಆಗಿದ್ದವರು. ಅವರ ಸ್ಥಾನವನ್ನು ತುಂಬುವುದು ಅಷ್ಟು ಸುಲಭವಲ್ಲ. ಇದೀಗ ಟೀಂ ಇಂಡಿಯಾದಲ್ಲಿ ಮಧ್ಯಮ ಕ್ರಮಾಂಕಕ್ಕಾಗಿ ಹಲವು ಆಟಗಾರರು ಪೈಪೋಟಿಯಲ್ಲಿದ್ದಾರೆ. ಅವರು ಯಾರು ಎಂದು ಇಲ್ಲಿದೆ ನೋಡಿ ಲಿಸ್ಟ್.

ಶ್ರೇಯಸ್ ಅಯ್ಯರ್: ಟೀಂ ಇಂಡಿಯಾದ ಸೀಮಿತ ಓವರ್ ಗಳಲ್ಲಿ ಅನುಭವಿಯಾದರೂ ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಶ್ರೇಯಸ್ ಅಯ್ಯರ್ ಗೆ ನಿಶ್ಚಿತ ಸ್ಥಾನವಿರಲಿಲ್ಲ. ಈಗ ಅವರು ಕೊಹ್ಲಿ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಾರೆ.

ಸರ್ಫರಾಜ್ ಖಾನ್: ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದ ಹೊಸತರಲ್ಲಿ ಹೊಡೆಬಡಿಯ ಆಟದ ಮೂಲಕ ಗಮನ ಸೆಳೆದಿದ್ದ ಸರ್ಫರಾಜ್ ಬಳಿಕ ಅವಕಾಶವಿಲ್ಲದೇ ಬಡವಾದರು. ಈಗ ಅವರೂ ಈ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ.

ದೇವದತ್ತ್ ಪಡಿಕ್ಕಲ್: ಕನ್ನಡಿಗ ಬ್ಯಾಟಿಗ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿಲ್ಲ. ಹಾಗಿದ್ದರೂ ಅವರೂ ಸ್ಪರ್ಧೆಯಲ್ಲಿರುವುದು ಸುಳ್ಳಲ್ಲ.

ರಜತ್ ಪಾಟೀದಾರ್: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕರಾಗಿರುವ ರಜತ್ ಪಾಟೀದಾರ್ ಈ ಹಿಂದೆ ಟೆಸ್ಟ್ ತಂಡದಲ್ಲಿ ಅವಕಾಶ ಸಿಕ್ಕಿಯೂ ಬಳಸಿಕೊಳ್ಳಲಿಲ್ಲ. ಆದರೆ ಈಗ ಐಪಿಎಲ್ ನಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದು ತಂಡಕ್ಕೆ ವಾಪಸಾದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

Virat Kohli: ಪತಿ ನಿವೃತ್ತಿ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿದ ಅನುಷ್ಕಾ ಶರ್ಮಾ