ವಿರಾಟ್ ಕೊಹ್ಲಿ ಬಳಗದ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಗೆ ಮುನ್ನ ಕೋಚ್ ಅನಿಲ್ ಕುಂಬ್ಳೆ ಜತೆಗೆ ಕೆಲವು ಉಲ್ಲಾಸದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಪುಲ ಚಿತ್ರಗಳನ್ನು ಅಪ್‌ಲೋಡ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ತಮ್ಮ ಇರುವಿಕೆ ಕುರಿತು ಮಾಹಿತಿ ನೀಡುತ್ತಿದ್ದರು.
ಆದರೆ ಅವರು ಅಪ್ಲೋಡ್ ಮಾಡಿದ ಚಿತ್ರಗಳಲ್ಲೊಂದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ಅವರಿಗೆ ಸ್ವಲ್ಪ ತೊಂದರೆಯನ್ನು ಉಂಟುಮಾಡಿದೆ. ಕೆಲವು ದಿನಗಳ ಹಿಂದೆ ರಾಹುಲ್ ತನ್ನ ಟ್ವಿಟರ್ ಖಾತೆ ಮೂಲಕ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಬಿಯರ್ ಸೀಸೆಯನ್ನು ರಾಹುಲ್ ಕೈಯಲ್ಲಿ ಹಿಡಿದಿದ್ದ ಚಿತ್ರವಿತ್ತು. ಈ ಚಿತ್ರ ವಿವಾದಕ್ಕೆ ಎಡೆ ಮಾಡಿದ ಬಳಿಕ ರಾಹುಲ್ ಚಿತ್ರವನ್ನು ಟ್ವಿಟರ್ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.
ಇಂತಹ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕೆ ಕೆಲವು ಬಿಸಿಸಿಐ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಮಕ್ಕಳಿಗೆ ಕೆಟ್ಟ ನಿದರ್ಶನವಾಗುವಂತ ಚಿತ್ರಗಳನ್ನು ಅಪ್‌ಲೋಡ್ ಮಾಡದಂತೆ ಟೀಂ ಮ್ಯಾನೇಜರ್‌ಗೆ ಸ್ಪಷ್ಟ ಸಂದೇಶವನ್ನು ಕಳಿಸಿದರು.
ಕ್ರಿಕೆಟ್ ಸ್ಟಾರ್‌ಗಳನ್ನು ಅನೇಕ ಮಕ್ಕಳು ಮೈದಾನದಲ್ಲಿ ಮತ್ತು ಹೊರಗೆ ಅನುಕರಣೆ ಮಾಡುವುದರಿಂದ ಭಾರತದ ಕ್ರಿಕೆಟ್ ಅಭಿಮಾನಿಗಳ ಸಂವೇದನೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದರು. ಬಿಯರ್ ಸೀಸೆ ಚಿತ್ರದಿಂದ ವಿವಾದ ಉಂಟಾಗಿದ್ದರಿಂದ ರಾಹುಲ್ ಈ ಚಿತ್ರವನ್ನು ಟ್ವಿಟರ್ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.