Webdunia - Bharat's app for daily news and videos

Install App

ವಿಶ್ವಕಪ್ ಗೆದ್ದು ಬಂದರೂ ಪ್ಯಾಟ್ ಕ್ಯುಮಿನ್ಸ್ ಗೆ ಆಸ್ಟ್ರೇಲಿಯಾದಲ್ಲಿ ಇಂಥಾ ಸ್ವಾಗತವೇ?!

Webdunia
ಗುರುವಾರ, 23 ನವೆಂಬರ್ 2023 (12:49 IST)
Photo Courtesy: Twitter
ಸಿಡ್ನಿ: ಇತ್ತೀಚೆಗಷ್ಟೇ ಮುಕ್ತಾಯವಾದ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಗೆದ್ದು ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಬೀಗಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ನಾಯಕ ಪ್ಯಾಟ್ ಕ್ಯುಮಿನ್ಸ್ ಗೆ ಎಂಥಾ ಸ್ವಾಗತ ಸಿಕ್ಕಿದೆ ನೋಡಿ!

ವಿಶ್ವ ಚಾಂಪಿಯನ್ ಆದ ಖುಷಿಯಲ್ಲಿ ಆಸೀಸ್ ನಾಯಕ ಪ್ಯಾಟ್ ಕ್ಯುಮಿನ್ಸ್ ಭಾರತದಿಂದ ತವರಿಗೆ ಬಂದಿಳಿದಾಗ ಅವರ ಸ್ವಾಗತಕ್ಕೆ ಯಾರೂ ಇರಲಿಲ್ಲ! ವಿಮಾನ ನಿಲ್ದಾಣದಲ್ಲಿ ಕ್ಯುಮಿನ್ಸ್ ಬಂದಿಳಿದಾಗ ಒಂದಿಬ್ಬರು ಪತ್ರಕರ್ತರು ಫೋಟೋ ತೆಗೆಯುತ್ತಿದ್ದುದು ಬಿಟ್ಟರೆ ಅವರನ್ನು ಸ್ವಾಗತಿಸಲು ಯಾರೂ ಇರಲಿಲ್ಲ.

ಆಸ್ಟ್ರೇಲಿಯಾ ಇದು ಆರನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಶಿಪ್ ಗೆಲ್ಲುತ್ತಿದೆ. ಹಾಗಿದ್ದರೂ ಆಸ್ಟ್ರೇಲಿಯಾದಲ್ಲಿ ಇದಕ್ಕೆ ವಿಶೇಷ ಕಿಮತ್ತೇನೂ ಇಲ್ಲ ಎಂಬುದು ಇದರಲ್ಲಿಯೇ ಗೊತ್ತಾಗುತ್ತದೆ.

ಇದೇ ಒಂದು ವೇಳೆ ಟೀಂ ಇಂಡಿಯಾ ಈ ಬಾರಿ ವಿಶ್ವಕಪ್ ಗೆದ್ದಿದ್ದರೆ ರೋಹಿತ್ ಬಳಗಕ್ಕೆ ಯಾವ ಬಗೆಯ ಸ್ವಾಗತ ಇರುತ್ತಿತ್ತು ಎಂಬುದನ್ನು ಊಹಿಸಲೂ ಸಾಧ‍್ಯವಿಲ್ಲ. ಭಾರತದಲ್ಲಿ ಕ್ರಿಕೆಟ್ ನ್ನು ಧರ್ಮದಂತೆ ಪ್ರೀತಿಸುತ್ತಾರೆ. ಒಂದು ವೇಳೆ ವಿಶ್ವಕಪ್ ಗೆದ್ದಿದ್ದರೆ ಆಟಗಾರರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದರು. ಆದರೆ ಆಸ್ಟ್ರೇಲಿಯಾದಲ್ಲಿ ಇದು ಯಾವುದೂ ಲೆಕ್ಕಕ್ಕೇ ಇಲ್ಲ ಎಂಬುದು ಈ ಘಟನೆಯೇ ಹೇಳುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

IND vs ENG: ರಿಷಭ್ ಪಂತ್ ಗಾಯ ಹೇಗಿದೆ, ಮುಂದಿನ ಪಂದ್ಯದಲ್ಲಿ ಆಡ್ತಾರಾ

ಮೂರನೇ ಟೆಸ್ಟ್‌ನ ಕೊನೆಯಲ್ಲಿ ಸಿರಾಜ್‌ ಔಟಾದಾಗ ಏನನ್ನಿಸಿತು: ಶುಭಮನ್‌ ಗಿಲ್‌ಗೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

IND vs ENG: ಹಾರ್ಟ್ ಬ್ರೇಕ್ ನಂತರ ಟೀಂ ಇಂಡಿಯಾ ಮುಂದಿನ ಟೆಸ್ಟ್ ಪಂದ್ಯ ಯಾವಾಗ, ಎಲ್ಲಿ

ಮುಂದಿನ ಸುದ್ದಿ
Show comments