Publish Date: Mon, 24 Oct 2016 (12:34 IST)
Updated Date: Mon, 24 Oct 2016 (12:37 IST)
ಅಬುದಾಬಿ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಬೃಹತ್ ಮುನ್ನಡೆ ಗಳಿಸಿದ್ದುಗೆಲುವಿನತ್ತ ದಾಪುಗಾಲಿಟ್ಟಿದೆ.
ನಾಲ್ಕನೇ ದಿನವಾದ ಇಂದು ಇತ್ತೀಚೆಗಿನ ವರದಿ ಬಂದಾಗ ಪಾಕಿಸ್ತಾನ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 170 ರನ್ ಗಳಿಸಿದೆ. ಯೂನಿಸ್ ಖಾನ್ ಮತ್ತು ಅಸದ್ ಶಫೀಕ್ ಕ್ರೀಸ್ ನಲ್ಲಿದ್ದಾರೆ. ಪಾಕ್ ಮೊದಲ ಇನಿಂಗ್ಸ್ ನಲ್ಲಿ452 ರನ್ ಪೇರಿಸಿತ್ತು.
ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ಕೇವಲ 224 ರನ್ ಗಳಿಗೆ ಆಲೌಟ್ ಆಗಿತ್ತು. ಇದರಿಂದಾಗಿ ಪಾಕಿಸ್ತಾನಕ್ಕೆ ಒಟ್ಟಾರೆ 398 ರನ್ ಗಳ ಮುನ್ನಡೆ ಲಭಿಸಿದೆ. ನಾಳೆಯೂ ಒಂದು ದಿನ ಬಾಕಿಯಿದ್ದು ಪಾಕಿಸ್ತಾನ ಗೆಲ್ಲುವುದು ಬಹುತೇಕ ಖಚಿತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ