Daily Horoscope

Select Your Language

Notifications

webdunia
webdunia
webdunia
webdunia

ಐಪಿಎಲ್ ಒಳ್ಳೆಯದಲ್ಲ ಎಂದ ಸ್ಟೀವ್ ವಾ

ಆಸ್ಟ್ರೇಲಿಯಾ ಕ್ರಿಕೆಟ್
ಸಿಡ್ನಿ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಸ್ಟೀವ್ ವಾ ತಮ್ಮ ದೇಶದ ಕ್ರಿಕೆಟಿಗರಿಗೆ ಐಪಿಎಲ್ ಪಂದ್ಯಗಳಲ್ಲಿ ಆಡದಂತೆ ಕಿವಿಮಾತು ಹೇಳಿದ್ದಾರೆ.

“ನಾನು ಇಂದಿನ ಕ್ರಿಕೆಟಿಗರ ವೇಳಾಪಟ್ಟಿ ನೋಡಿದ್ದೇನೆ. ನನ್ನ ಕಾಲದಲ್ಲೂ ಆಡುತ್ತಿದ್ದಷ್ಟೇ ಪಂದ್ಯಗಳನ್ನು ಅವರು ದೇಶದ ಪರವಾಗಿ ಆಡುತ್ತಿದ್ದಾರೆ. ಆದರೆ ಐಪಿಎಲ್ ಕ್ರಿಕೆಟ್ ಅವರಿಗೆ ಹೊರೆಯಾಗುತ್ತಿದೆ. ಕ್ರಿಕೆಟಿಗರು ಬಳಲುತ್ತಿದ್ದಾರೆ. ಅತಿಯಾಗಿ ಆಡುವುದು ಒಳ್ಳೆಯದಲ್ಲ” ಎಂದು ವಾ ಹೇಳಿದ್ದಾರೆ.

ಆಸೀಸ್ ತಂಡ ಫೆಬ್ರವರಿಯಲ್ಲಿ ಶ್ರೀಲಂಕಾ ಸರಣಿ ಮುಗಿದ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಐಪಿಎಲ್ ನಲ್ಲಿ ಭಾಗವಹಿಸುವುದರಿಂದ ಅವರು ಸುಸ್ತಾಗುವ ಸಾಧ್ಯತೆ ಹೆಚ್ಚುಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ತಾವು ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲೂ ಅಂತರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿ ಹತ್ತಿರದಲ್ಲಿದ್ದಾಗ ಕ್ಲಬ್ ಕ್ರಿಕೆಟ್ ಆಡುತ್ತಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಕ್ಯಾಚ್ ಕೈ ಬಿಟ್ಟಿದ್ದಕ್ಕೆ ಬೆಲೆ ತೆತ್ತ ಕಿವೀಸ್