Daily Horoscope

Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಕ್ಯಾಚ್ ಕೈ ಬಿಟ್ಟಿದ್ದಕ್ಕೆ ಬೆಲೆ ತೆತ್ತ ಕಿವೀಸ್

ಟೀಂ ಇಂಡಿಯಾ
ಮೊಹಾಲಿ: ಕ್ಯಾಚ್ ವಿನ್ಸ್ ದ ಮ್ಯಾಚ್ ಎಂಬ ಮಾತನ್ನು ನ್ಯೂಜಿಲೆಂಡ್ ತಂಡ ಈಗ ಚೆನ್ನಾಗಿ ಅರಿತಿದೆ. ನಿನ್ನೆ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಅಬ್ಬರದ ಬ್ಯಾಟಿಂಗ್ ಗೆ ಒಂದು ರೀತಿಯಲ್ಲಿ ಕಿವೀಸ್ ಆಟಗಾರರೇ ಕಾರಣ.

ಕೊಹ್ಲಿ 6 ರನ್ ಗಳಿಸಿದ್ದಾಗ ರಾಸ್ ಟೇಲರ್ ಕ್ಯಾಚ್ ಬಿಟ್ಟಿದ್ದರು. ಆಗ ಭಾರತದ ಸ್ಕೋರ್ ಕೇವಲ 40  ರನ್ ಆಗಿತ್ತು. ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದ್ದರು. ಈ ಸಂದರ್ಭದಲ್ಲಿ ಕೊಹ್ಲಿಯ ವಿಕೆಟ್ ಹಾರಿದ್ದರೆ ನ್ಯೂಜಿಲೆಂಡ್ ನಿಶ್ಚಿತವಾಗಿ ಮೇಲುಗೈ ಸಾಧಿಸುತ್ತಿತ್ತು.

ಆದರೆ ರಾಸ್ ಟೇಲರ್ ಮಾಡಿದ ತಪ್ಪಿಗೆ ಅವರ ತಂಡ ಬೆಲೆ ತೆತ್ತಿತು. ಮುಂದಿನದೆಲ್ಲಾ ಗೊತ್ತೇ ಇದೆ. ಕೊಹ್ಲಿ ಅಂತ್ಯದವರೆಗೂ ನಾಟೌಟ್ ಆಗಿ ಉಳಿದರು. ಭಾರತಕ್ಕೆ ಗೆಲುವನ್ನೂ ದೊರಕಿಸಿಕೊಟ್ಟರು. ಇದರ ಬಗ್ಗೆ ಪಂದ್ಯ ಪುರುಷ ಪ್ರಶಸ್ತಿ ಸ್ವೀಕರಿಸುವಾಗ ಮಾತನಾಡಿದ ಕೊಹ್ಲಿ ಕ್ಯಾಚ್ ಬಿಟ್ಟ ಟೇಲರ್ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು. ವಿಶೇಷ ಎಂದರೆ ಈ ಇಬ್ಬರೂ ಆಟಗಾರರು ಪಂದ್ಯ ಮುಗಿದಾಗ ಪರಸ್ಪರ ನಗುತ್ತಾ ಕೈ ಕುಲುಕಿದರು.

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸ್ ಸನ್ ಕೂಡಾ ಕೊಹ್ಲಿಯಂತಹ ಬ್ಯಾಟ್ಸ್ ಮನ್ ಗೆ ಎರಡನೇ ಚಾನ್ಸ್ ಸಿಕ್ಕರೆ ಹಿಡಿದಿಡುವುದು ಅಸಾಧ್ಯ ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೋಚಕ ಪಂದ್ಯದಲ್ಲಿ ಕೊನೆಗೂ ಸೋತ ಬಾಂಗ್ಲಾದೇಶ