Publish Date: Mon, 24 Oct 2016 (10:30 IST)
Updated Date: Mon, 24 Oct 2016 (10:37 IST)
ಢಾಕಾ: ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ನಡುವೆ ನಡೆಯುತ್ತಿರವ ಮೊದಲ ಟೆಸ್ಟ್ ಪಂದ್ಯವನ್ನು ಕೊನೆಗೂ ಅತಿಥೇಯ ಬಾಂಗ್ಲಾ ಕೈ ಚೆಲ್ಲಿದೆ.
ನಿನ್ನೆ ಬಾಂಗ್ಲಾದೇಶ ಗೆಲುವಿಗೆ 33 ರನ್ ಬೇಕಾಗಿದ್ದಾಗ ನಾಲ್ಕನೇ ದಿನದ ಆಟ ಮುಕ್ತಾಯವಾಗಿತ್ತು. ತೈಜುಲ್ ಇಸ್ಲಾಂ ಮತ್ತು ಶಬ್ಬೀರ್ ರೆಹಮಾನ್ ಕ್ರೀಸ್ ನಲ್ಲಿದ್ದರು. ಇಂಗ್ಲೆಂಡ್ ಗೆ ಕೇವಲ 2 ವಿಕೆಟ್ ಆವಶ್ಯಕತೆಯಿತ್ತು. ಆದರೂ ತವರಿನ ಕಲಿಗಳು ಪಂದ್ಯ ಗೆದ್ದು ಹೀರೋಗಳಾಗುತ್ತಾರೆ. ಬಾಂಗ್ಲಾದೇಶ ಇನ್ನೇನು ಇಂಗ್ಲೆಂಡ್ ವಿರುದ್ಧ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಗೆದ್ದ ದಾಖಲೆ ಮಾಡುತ್ತದೆ ಎಂದೇ ನಂಬಲಾಗಿತ್ತು. ಆದರೆ ಆಗಿದ್ದೇ ಬೇರೆ.
ಇಂದು ಬೆಳಿಗ್ಗೆ ಪಂದ್ಯ ಆರಂಭವಾದಾಗ ಇಂಗ್ಲೆಂಡ್ ವೇಗಿ ಬೆನ್ ಸ್ಟೋಕ್ ದಾಳಿಗೆ ನಲುಗಿದ ಬಾಂಗ್ಲಾ 10 ರನ್ ಸೇರಿಸಿ ಆಲೌಟ್ ಆಯಿತು. ಇದರೊಂದಿಗೆ ಪಂದ್ಯ ಗೆದ್ದು ಹೀರೋಗಳಾಗಬೇಕಿದ್ದ ಬಾಂಗ್ಲಾ ಹುಡುಗರು ನಿರಾಸೆ ಅನುಭವಿಸಿದರು.
ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 293 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 240 ರನ್ ಗಳಿಸಿತ್ತು. ಬಾಂಗ್ಲಾ ಮೊದಲ ಸರದಿಯಲ್ಲಿ 248 ಮತ್ತು ದ್ವಿತೀಯ ಸರದಿಯಲ್ಲಿ 263 ರನ್ ಗಳಿಸಲಷ್ಟೇ ಶಕ್ತವಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ