Publish Date: Tue, 25 Oct 2016 (08:59 IST)
Updated Date: Tue, 25 Oct 2016 (09:08 IST)
ಅಬುದಾಬಿ: ವೆಸ್ಟ್ ಇಂಡೀಸ್ ವಿರುದ್ಧನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಸ್ಪಷ್ಟ ಮೇಲುಗೈ ಸಾಧಿಸಿದೆ.
ನಾಲ್ಕನೇ ದಿನದ ಅಂತ್ಯಕ್ಕೆ ಪಾಕ್ ನೀಡಿದ 456 ರನ್ನುಗಳ ಬೃಹತ್ ಮೊತ್ತ ಬೆನ್ನತ್ತಿರುವ ವಿಂಡೀಸ್ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ. ಪಂದ್ಯ ಉಳಿಸಿಕೊಳ್ಳಲು ಅಂತಿಮ ದಿನ ವಿಂಡೀಸ್ ಇನ್ನೂ 285 ರನ್ ಮಾಡಬೇಕಿದೆ. ಆದರೆ ಪ್ರಮುಖ ವಿಕೆಟ್ ಉರುಳಿದ್ದರಿಂದ ಇದು ಅಸಾಧ್ಯವೆಂದೇ ಹೇಳಬಹುದು.
ವಿಂಡೀಸ್ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಕ್ರೆಗ್ ಬ್ರಾತ್ ವೇಟ್ 67 ರನ್ ಮಾಡಿದರು. ಸದ್ಯ ಕ್ರೀಸ್ ನಲ್ಲಿರುವ ಜರ್ಮೈನ್ ಬ್ಲ್ಯಾಕ್ ವುಡ್ 41 ರನ್ ಗಳಿಸಿದ್ದಾರೆ. ಇದಕ್ಕೂ ಮೊದಲು ದ್ವಿತೀಯ ಇನಿಂಗ್ಸ್ ನಲ್ಲಿ ಪಾಕಿಸ್ತಾನ 227 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು.
ಪಾಕಿಸ್ತಾನ ಮೊದಲ ಟೆಸ್ಟ್ ಪಂದ್ಯವನ್ನೂ ಗೆದ್ದಿತ್ತು. ಈ ಪಂದ್ಯವನ್ನು ಗೆದ್ದರೆ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಪಾಕ್ ತನ್ನದಾಗಿಸಿಕೊಳ್ಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ