Select Your Language

Notifications

webdunia
webdunia
webdunia
webdunia

ಪಿ.ವಿ.ಸಿಂಧು ಪ್ಯಾರಿಸ್ ಓಪನ್ ಗೆ ರೆಡಿ

ಪಿ.ವಿ.ಸಿಂಧು ಪ್ಯಾರಿಸ್ ಓಪನ್ ಗೆ ರೆಡಿ
ಪ್ಯಾರಿಸ್ , ಮಂಗಳವಾರ, 25 ಅಕ್ಟೋಬರ್ 2016 (08:43 IST)
ಪ್ಯಾರಿಸ್: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಬ್ಯಾಡ್ಮಿಂಟನ್ ತಾರೆ ಪ್ಯಾರಿಸ್ ಓಪನ್ ನಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ವಾರ ಡೆನ್ಮಾರ್ಕ್ ಓಪನ್ ನ ಎರಡನೇ ಸುತ್ತಿನಲ್ಲಿ ಸಿಂಧು ಸೋಲುಂಡಿದ್ದರು.

ಮೊದಲ ಸುತ್ತಿನಲ್ಲಿ ಸಿಂಧು ಜಪಾನ್ ಆಟಗಾರ್ತಿ ಸಯಾಕ ಸ್ಯಾಟೋ ವಿರುದ್ಧ ಸೆಣಸಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಜಯ್ ಜಯರಾಂ ಅರ್ಹತಾ ಸುತ್ತಿನಲ್ಲಿ ಆಡಲಿದ್ದಾರೆ.

ಪುರುಷರ ಡಬಲ್ಸ್ ವಿಭಾಗದಿಂದ ರಿಯೋ ಒಲಿಂಪಿಕ್ಸ್ ನಲ್ಲಿ ಆಡಿದ್ದ ಬಿ ಸುಮೀತ್ ರೆಡ್ಡಿ ಮತ್ತು ಮನು ಅತ್ರಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪುರುಷರ ಇನ್ನೊಂದು ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ ಅರ್ಹತಾ ಸುತ್ತಿನಲ್ಲಿ ಸೆಣಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಿಯಲ್ ಧೋನಿ ಆಟ ನೋಡಲು ಬಂದ ರೀಲ್ ಧೋನಿ